VIDEO| ಸವದತ್ತಿ ಎಲ್ಲಮ್ಮ ಜಾತ್ರೆ ಎತ್ತಿನಗಾಡಿ ಓಟದ ಸ್ಪರ್ಧೆ: ಮುಂಜಾಗ್ರತಾ ಕ್ರಮವಿಲ್ಲದ ಕಾರಣ ಕಾರಿಗೆ ಡಿಕ್ಕಿ, ತೀವ್ರ ಗಾಯಗೊಂಡ ಕಾರು ಚಾಲಕ

bailahonngala jan 16
Published on

ಬೆಳಗಾವಿ: ಸವದತ್ತಿ ಎಲ್ಲಮ್ಮ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಅಪಘಾತ ಸಂಭವಿಸಿದೆ.

ಬೈಲಹೊಂಗಲ ತಾಲೂಕಿನ ನಯಾನಗರ ಸೇತುವೆ ಬಳಿ ಸ್ಪರ್ಧೆಯಲ್ಲಿದ್ದ ಎತ್ತಿನ ಗಾಡಿ ಕಾರಿಗೆ ಗುದ್ದಿದ ಪರಿಣಾಮ ಚಾಲಕ ತೀವ್ರ ಗಾಯಗೊಂಡಿದ್ದಾನೆ. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎತ್ತಿನ ಗಾಡಿ ನಯಾನಗರ ಸೇತುವೆ ಬಳಿ ತೆರಳುತ್ತಿತ್ತು. ಕಾರು ಎದುರಿನಿಂದ ಬರುತ್ತಿತ್ತು. ಗಾಡಿಗೆ ಕಟ್ಟಿದ್ದ ಎತ್ತು ಎಡಕ್ಕೆ ಚಲಿಸುವ ಬದಲು ನೇರವಾಗಿ ಚಲಿಸಿ ಕಾರಿಗೆ ಡಿಕ್ಕಿ ಹೊಡೆಯಿತು. ಇದರಿಂದ ಚಾಲಕ ತೀವ್ರವಾಗಿ ಗಾಯಗೊಂಡ. ಸ್ಪರ್ಧೆಯಲ್ಲಿ ನೂರಾರು ಎತ್ತಿನಗಾಡಿಗಳು ಇದ್ದವು. ಸವದತ್ತಿ ಎಲ್ಲ ಜಾತ್ರೆ ಅಂಗವಾಗಿ ಪ್ರತಿ ವರ್ಷ ಸ್ಪರ್ಧೆ ನಡೆಸಲಾಗುತ್ತದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net