ಸಂದರ್ಶನ ನೆಪದಲ್ಲಿ ಸೌದಿ ಮಹಿಳೆಯನ್ನು ಮಂಚಕ್ಕೆ ಕರೆದ ಖ್ಯಾತ ಯೂಟ್ಯೂಬರ್​! ಆತನ ಮಾತು ಕೇಳಿ ಸಂತ್ರಸ್ತೆ ಶಾಕ್​

Kerala Youtuber (1)
Published on

ತಿರುವನಂತಪುರ: ಸೌದಿ ಅರೇಬಿಯಾ ಮೂಲದ ಮಹಿಳೆಯ ಮೇಲೆ ಕೇರಳದ ಖ್ಯಾತ ಯೂಟ್ಯೂಬರ್​ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಾಗಿದ್ದು, ಯೂಟ್ಯೂಬರ್​ ಬಂಧನಕ್ಕೆ ಬಲೆ ಬೀಸಲಾಗಿದೆ.

ಮಲ್ಲು ಟ್ರಾವೆಲ್ಲರ್​ ಅಲಿಯಾಸ್​ ಶಕೀರ್​ ಸುಭಾನ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.13ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳುವ ಮೂಲಕ ಶಕೀರ್​ ಸುಭಾನ್​ ವಿರುದ್ಧ ಸಂತ್ರಸ್ತೆ ಆರೋಪಗಳ ಸುರಿಮಳೆಗೈದಿದ್ದಾರೆ.

ಶಕೀರ್ ಸಂದರ್ಶನಕ್ಕೆಂದು ಕೊಚ್ಚಿಯ ಖಾಸಗಿ ಹೋಟೆಲ್‌ಗೆ ಕರೆದನು. ನಾನು ಕೋಯಿಕ್ಕೋಡ್ ಮೂಲದ ನನ್ನ ಭಾವಿ ಪತಿಯೊಂದಿಗೆ ಹೋಟೆಲ್‌ಗೆ ಹೋಗಿದ್ದೆ. ನನ್ನ ಭಾವಿ ಪತಿ ಹೊರಗೆ ಹೋದಾಗ, ಶಕೀರ್ ನನ್ನ ಬಳಿಗೆ ಬಂದು ಮಾತನಾಡಿದನು. ನಂತರ ನನ್ನ ಕೈ ಹಿಡಿದು ಮತ್ತು ನನ್ನನ್ನು ಹಾಸಿಗೆಯ ಮೇಲೆ ತಳ್ಳಿದನು. ಬಳಿಕ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದನು. ಈ ವೇಳೆ ನಾನು ಅವನನ್ನು ಬಲವಾಗಿ ತಳ್ಳಿದೆ ಮತ್ತು ನನ್ನ ಒಪ್ಪಿಗೆಯಿಲ್ಲದೆ ನನ್ನ ದೇಹವನ್ನು ಏಕೆ ಮುಟ್ಟಿದೆ ಎಂದು ಪ್ರಶ್ನೆ ಮಾಡಿದೆ. ನಾನು ಒಬ್ಬ ಮನುಷ್ಯ ಮತ್ತು ನನ್ನಲ್ಲೂ ಭಾವನೆಗಳಿವೆ ಎಂದು ಉತ್ತರಿಸಿದನು. ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿರುವುದಾಗಿ ಎಂದು ಹೇಳಿದನು. ಆತನ ಉತ್ತರ ಕೇಳಿ ನನಗೆ ಆಘಾತವಾಯಿತು ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಶಕೀರ್ ಸುಭಾನ್ ಆರೋಪವನ್ನು ನಿರಾಕರಿಸಿದ್ದಾರೆ. ಕಿರುಕುಳದ ದೂರು ನಕಲಿಯಾಗಿದ್ದು, ಸಾಕ್ಷ್ಯಾಧಾರಗಳೊಂದಿಗೆ ಅದನ್ನು ಎದುರಿಸುತ್ತೇನೆ ಎಂದು ಶಕೀರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net