

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಸತ್ಯ ಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಮ್ ಸಭಾಭವನದಲ್ಲಿ ಗುರುವಾರ ಕೈಗೊಂಡಿದ್ದ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಖ್ಯಾತ ಸಾಧಕರು ಹಾಗೂ ಪ್ರತಿಭಾವಂತ ಸಂಶೋಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಸದ್ಗುರು ಶ್ರೀ ಮಧುಸೂದನ್ ಸಾಯಿ, ಪದ್ಮವಿಭೂಷಣ ಪುರಸ್ಕೃತೆ ಹಾಗೂ ರಾಜ್ಯಸಭಾ ಸದಸ್ಯೆ ಡಾ. ಸೋನಲ್ ಮಾನ್ಸಿಂಗ್, ಶ್ರೀಲಂಕಾದ ಬೌದ್ಧ ಗುರು ಥೇರೋ, ಶ್ರೀಲಂಕಾ ಮಾಜಿ ಕ್ರಿಕೆಟ್ ಆಟಗಾರ ಅರವಿಂದ ಡಿ ಸಿಲ್ವಾ ಮತ್ತಿತರರು ಪ್ರಧಾನ ಮಾಡಿದರು.
*ಗೌರವ ಡಾಕ್ಟರೇಟ್ ಪಡೆದ ಸಾಧಕರು*
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುಸ್ಥಿರ ಪರಿಸರ ಸಮತೋಲನದ ಕಲ್ಪನೆಯನ್ನು ಪರಿಚಯಿಸಿದ ಡಾ. ಅನಿಲ್ ಕಾಕೋಡ್ಕರ್ , ರಾಜ್ಯಾದ್ಯಂತ ವಿದ್ಯಾನಿವೇಶನಗಳನ್ನು ಸ್ಥಾಪಿಸಿ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳ ಪ್ರಧಾನ ಮಾರ್ಗದರ್ಶಕ ಹಾಗೂ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಾಧಿಪತಿ ಬಿ.ಎನ್. ನರಸಿಂಹಮೂರ್ತಿ, ಕ್ರೀಡಾ ಕ್ಷೇತ್ರದಲ್ಲಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ, ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಸಾಧಕಿ ಕವಿತಾ ಕೃಷ್ಣಮೂರ್ತಿ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ನವೋದ್ಯಮಗಳ ಸ್ಥಾಪಕ ಡಾ. ಜೆ. ಎ.ಚೌದರಿ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಪಡೆದರು.
*ಡಾಕ್ಟರೇಟ್ ಪಡೆದ ಸಂಶೋಧಕರು*
ಕುಮಾರಿ ಭುವನ ಸಂತಾನಂ (ಶಿಕ್ಷಣ), ಗೀತಾಂಜಲಿ ಅನ್ಮೋ (ತತ್ವಶಾಸ್ತ್ರ), ಗಾಡಿ ಪಾರ್ಥ ಸಾರಥಿ ( ಇತಿಹಾಸ), ಬಟ್ಟು ಭಾರ್ಗವ ಸಾಯಿ ( ಸಂಸ್ಕೃತ), ನಾಗಾಭರಣ ( ಗಣಿತಶಾಸ್ತ್ರ), ಜಿ.ಎಸ್.ಶ್ರೀವತ್ಸ(ಉಪನಿಷತ್),
ಕಾರ್ತಿಕ್ ಪಟೇಲ್ (ಗಣಕ ವಿಜ್ಞಾನ), ಪ್ರಬೋಧ ಮಾನಸ್ (ಇಂಗ್ಲೀಷ್ ಸಾಹಿತ್ಯ) ಸಂಶೋಧನೆಗೆ ಡಾಕ್ಟರೇಟ್ ಪದವಿಯ ಮನ್ನಣೆಗೆ ಪಾತ್ರರಾದರು. ಇದೇ ವೇಳೆ ಅಭೂತಪೂರ್ವ ಸಾಧನೆಗಾಗಿ 22 ಮಂದಿ ಸ್ನಾತಕೋತ್ತರ ಪದವೀಧರರು ಚಿನ್ನದ ಪದಕ, 81 ಮಂದಿ ಪದವೀಧರರು ಪದವಿಗಾದಿ ಪಡೆದುಕೊಂಡರು.