ಸರ್ಕಾರಿ ಕಾರ್ನರ್| ವಿಶೇಷ ವೇತನ ಬಡ್ತಿ ಪಡೆಯಲು ಅರ್ಹತೆ ಇದೆಯಾ?

sarkari corner4
Published on

ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿದ್ದೇನೆ. ನನಗೆ ಒಬ್ಬ ಮಗನಿದ್ದಾನೆ. ನನ್ನ ಪತ್ನಿಯ ಗರ್ಭಕೋಶದಲ್ಲಿ ತೊಂದರೆ ಇದ್ದ ಕಾರಣ ಶಸ್ತ್ರಚಿಕಿತ್ಸೆಯಿಂದ ಅದನ್ನು ತೆಗೆಸಲಾಗಿದೆ. ಹಾಗಾಗಿ ಕುಟುಂಬ ಯೋಜನೆ ಅನುಸರಣೆ ಕಾರಣಕ್ಕೆ ನಾನು ಒಂದು ವಿಶೇಷ ವೇತನ ಬಡ್ತಿ ಪಡೆಯಲು ಅರ್ಹನಾಗುತ್ತೇನೆಯೇ?

| ಕೃಷ್ಣಮೂರ್ತಿ ಮಂಡ್ಯ

ದಿನಾಂಕ- 01.10.1985ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ27/ಎಸ್​ಆರ್​ಎಸ್ 85ರಂತೆ ಪುರುಷ ಸರ್ಕಾರಿ ನೌಕರನಾದರೆ 50 ವರ್ಷದೊಳಗಿದ್ದು, ಆತನ ಪತ್ನಿ 20 ರಿಂದ 45 ವರ್ಷದೊಳಗಿನವರಾಗಿದ್ದು, ಆಕೆಯು ಟ್ಯುಬೆಕ್ಟಮಿ ಅಥವಾ ಲೆಪ್ರೋಸ್ಕೊಪಿ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಿದ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ಈ ವಿಶೇಷ ವೇತನ ಬಡ್ತಿ ಲಭ್ಯವಾಗುತ್ತದೆ. ಗರ್ಭಕೋಶ ತೆಗೆಸುವುದಕ್ಕೆ ಇದು ಅನ್ವಯಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net