

ಪ್ರಶ್ನೆ: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸಿ ದರ್ಜೆ ನೌಕರಳಾಗಿದ್ದ ನನ್ನ ಸಹೋದರಿ, ದಿನಾಂಕ 9-4-2021ರಂದು ಅಕಾಲಿಕ ಮರಣ ಹೊಂದಿದ್ದಾಳೆ. ಆಕೆ ಅವಿವಾಹಿತಳಾಗಿದ್ದು, ತಂದೆ-ತಾಯಿ, ನಾನು ಹಾಗೂ ಇಬ್ಬರು ಸಹೋದರಿಯರು ಇದ್ದೇವೆ. ಸಹೋದರಿಯ ನಿಧನದ ಅನುಕಂಪ ಆಧಾರದ ನೌಕರಿಯನ್ನು ನನ್ನ ಇನ್ನೊಬ್ಬ ಸಹೋದರಿಯು ಕೋರಿಕೆ ಮೇಲೆ ಪಡೆಯಬಹುದೇ?
| ಮಂಜುನಾಥ ಗುಡ್ಡಣ್ಣವರ ವಿದ್ಯಾನಗರ, ಹುಬ್ಬಳ್ಳಿ
ಉತ್ತರ: 1996ರ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಮಾವಳಿಯ ನಿಯಮ 3ರಂತೆ ಅವಿವಾಹಿತ ಮಹಿಳಾ ಸರ್ಕಾರಿ ನೌಕರಳು ಮರಣ ಹೊಂದಿದರೆ ಆಕೆಯ ಸಹೋದರಿಯರು ಅವಳೊಡನೆ ವಾಸವಾಗಿದ್ದು, ಸಂಪೂರ್ಣವಾಗಿ ಅವಲಂಬಿತರಾಗಿ ಜೀವನ ಮಾಡುವಂತಿದರೆ ಅನುಕಂಪದ ನೇಮಕಾತಿಗೆ ಅರ್ಹತೆ ಪಡೆಯುತ್ತಾರೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.