ಸರ್ಕಾರಿ ಕಾರ್ನರ್​: ಅನುಕಂಪ ಆಧಾರದ ಮೇಲೆ ನೌಕರಿ

corner
Published on
ದಿನದ ಸುದ್ದಿ

ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರನಾಗಿ 1987ರಿಂದ ಕೆಲಸ ಮಾಡುತ್ತಿದ್ದ ನಮ್ಮ ತಂದೆ 2022ರ ಫೆ.12ರಂದು ನಿಧನರಾಗಿದ್ದಾರೆ. ಅವರ ಪುತ್ರನಾದ ನನಗೆ ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿ ಲಭಿಸುವುದೇ?

| ರಾಮಣ್ಣ ಮೈಸೂರು

ದಿನಾಂಕ 2.1.1997ರ ಸರ್ಕಾರಿ ಸುತ್ತೋಲೆ ಸಿಆಸುಇ 11, ಸೇಅನೆ 95ರಂತೆ ದಿನಾಂಕ 1.4.1984ಕ್ಕಿಂತ ಮೊದಲು ದಿನಗೂಲಿ ನೌಕರರಾಗಿ ನೇಮಕವಾಗಿ ದಿನಾಂಕ 31.12.1981ಕ್ಕೆ 10 ವರ್ಷ ಕೆಲಸ ಮಾಡಿ ಸಕ್ರಮಗೊಂಡ ನೌಕರರ ಅವಲಂಬಿತರಿಗೆ 1996ರ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಮಾವಳಿ ರೀತ್ಯ ಸರ್ಕಾರಿ ನೌಕರಿ ಲಭ್ಯವಾಗುತ್ತದೆ. ಆದರೆ, ನಿಮ್ಮ ತಂದೆ ತದನಂತರ ವರ್ಷದಲ್ಲಿ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಾಗಿ ನಿಯೋಜಿತರಾಗಿದ್ದು, ಕಾಯಂ ಆಗದ ಕಾರಣ ಅನುಕಂಪದ ನೇಮಕ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net