

ಪ್ರಶ್ನೆ: "ಸಿ' ಗ್ರೂಪ್ ನೌಕರಳಾಗಿದ್ದ ನನ್ನ ಪತ್ನಿ 2021ರ ಜುಲೈನಲ್ಲಿ ನಿಧನರಾಗಿದ್ದಾರೆ. ನನ್ನ ವಾರ್ಷಿಕ ಪಿಂಚಣಿ 8.40 ಲಕ್ಷ ರೂ. ಆಗಿರುತ್ತದೆ. ನನ್ನ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೇಮಕಾತಿ ಸಿಗುವುದೇ?
| ಪ್ರಕಾಶ್, ರಾಯಚೂರು
ಉತ್ತರ :1996ರ ಕರ್ನಾಟಕ ಸರ್ಕಾರಿ ಸೇವಾ ಅನುಕಂಪದ ನೇಮಕ ನಿಯಮಾವಳಿಯ ನಿಯಮ 4(1)ಕ್ಕೆ ಸರ್ಕಾರವು ದಿನಾಂಕ: 09.04.2021ರಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ, ಸಿ ಅಥವಾ ಡಿ ಗುಂಪಿನ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದರೆ, ಅವಲಂಬಿತ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇದ್ದ ಕೌಟುಂಬಿಕ ಆದಾಯಮಿತಿ ತೆಗೆದು ಹಾಕಿದೆ. ನಿಮ್ಮ ಪತ್ನಿಯು ಈ ದಿನಾಂಕದ ನಂತರ ನಿಧನ ಹೊಂದಿರುವುದರಿಂದ ನಿಮ್ಮ ಮಕ್ಕಳಿಗೆ ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿ ಲಭ್ಯವಾಗುತ್ತದೆ. ನೀವು 2 ವರ್ಷದೊಳಗೆ ಅಗತ್ಯ ದಾಖಲೆಗಳೊಂದಿಗೆ, ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ನಿಮ್ಮ ಮಕ್ಕಳ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ನೋಡಿ.