ಸರ್ಕಾರಿ ಕಾರ್ನರ್​: ಪಿಂಚಣಿ, ಉಪದಾನ, ಪರಿವರ್ತನಾ ಮೊತ್ತ

pension1
Published on

ಪ್ರಶ್ನೆ: ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯೊಂದರಲ್ಲಿ 01.07.1984ರಂದು ನಾನು ದ್ವೀತಿಯ ದರ್ಜೆ ಸಹಾಯಕನಾಗಿ ನೇಮಕ ಹೊಂದಿದ್ದೇನೆ. ನನ್ನ ಜನ್ಮ ದಿನಾಂಕ-10.06.1962 ಆಗಿದ್ದು, ದಿನಾಂಕ -30.06.2022ರಂದು ವಯೋ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಮೂಲ ವೇತನ 43,200 ರೂ. ಆಗಿದ್ದು, ನನಗೆ ಎಷ್ಟು ಪಿಂಚಣಿ, ಉಪದಾನ, ಪರಿವರ್ತನಾ ಮೊಬಲಗು ಲಭ್ಯವಾಗಬಹುದು?

| ಬಿ.ಎಸ್​.ಶಿವಕುಮಾರ್​, ಹುಬ್ಬಳ್ಳಿ

ಉತ್ತರ :ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ರೀತ್ಯಾ ನಿಮ್ಮ ಅರ್ಹತಾದಾಯಕ ವಯಸ್ಸು 30 ವರ್ಷವಾಗಿರುವುದರಿಂದ ಪಿಂಚಣಿಯು 21,600 ರೂ. ಹಾಗೂ ಉಪದಾನಕ್ಕೆ 33 ವರ್ಷ ಪರಿಗಣಿಸಲಾಗುವುದರಿಂದ 6,97,950 ರೂ. ಹಾಗೂ ಪರಿವರ್ತನಾ ಮೊಬಲಗು 8,47,584 ರೂ. ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕೈಪಿಡಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net