ಸರ್ಕಾರಿ ಕಾರ್ನರ್ | ಅಂಗವಿಕಲರಿಗೆ ಪಿಂಚಣಿ ಸೌಲಭ್ಯ

corner
Published on
ದಿನದ ಪ್ರಶ್ನೆ 

ನಾನು ರಾಜ್ಯ ಸರ್ಕಾರಿ ಪೌಢಶಾಲಾ ಶಿಕ್ಷಕನಾಗಿದ್ದು, ನನ್ನ ಸಹೋದ್ಯೋಗಿ ಕಳೆದ ತಿಂಗಳು ನಿಧನರಾದರು. ಅವರ ವಿವಾಹಿತ ಶೇ.48 ದೃಷ್ಟಿ ಮಾಂಧ್ಯ ಮಗ ಅನುಕಂಪ ಆಧಾರದ ಮೇಲೆ ನೌಕರಿ ಪಡೆಯಲು ಅರ್ಹನೇ? ಅಥವಾ ಪಿಂಚಣಿಗೆ ಮಾತ್ರ ಅರ್ಹನೇ?

| ಕೃಷ್ಣಾ ಭಟ್ ಚಿಕ್ಕಮಗಳೂರು

1996ರ ಕರ್ನಾಟಕ ಸರ್ಕಾರಿ ಸೇವೆ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಾವಳಿಯ ನಿಯಮ 3ರಂತೆ ಪ್ರಸ್ತುತ ವಿವಾಹಿತ ಮಗನೂ ನೇಮಕಕ್ಕೆ ಅರ್ಹ. ಅಲ್ಲದೆ, ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿ 2022ರ ನಿಯಮ 9ರಂತೆ ಸಂಪೂರ್ಣವಾಗಿ ದೃಷ್ಟಿ ಮಾಂಧ್ಯನಾಗಿದ್ದರೆ, ಜೀವಂತವಿರುವವರೆಗೆ ಕುಟುಂಬ ಪಿಂಚಣಿ ಪಡೆಯಲು ಅರ್ಹನಾಗುತ್ತಾನೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net