ಸರ್ಕಾರಿ ಕಾರ್ನರ್​ | ಕುಟುಂಬ ಪಿಂಚಣಿ ಸೌಲಭ್ಯ

corner
Published on
ದಿನದ ಪ್ರಶ್ನೆ 

ನನ್ನ ಪತಿ ಸರ್ಕಾರಿ ಉದ್ಯೋಗದಲ್ಲಿದ್ದರು. ಅವರ ನಿಧನ ನಂತರ ನಾನು ಅನುಕಂಪದ ಮೇರೆಗೆ ಸರ್ಕಾರಿ ಕೆಲಸಕ್ಕೆ ನೇಮಕಗೊಂಡಿದ್ದೇನೆ. ನಾನು ಕುಟುಂಬ ಪಿಂಚಣಿ ಪಡೆಯುತ್ತಿದ್ದು, ಕೆಲಸಕ್ಕೆ ರಾಜೀನಾಮೆ ನೀಡಿದರೆ ಈ ಸೌಲಭ್ಯ ಸಿಗಲಿದೆಯೇ?

| ಪ್ರಮಿಳಾ ತುಮಕೂರು

ಕರ್ನಾಟಕ ಸಿವಿಲ್ ಸೇವಾ (ಕುಟುಂಬ ಪಿಂಚಣಿ ) ನಿಯಮಾವಳಿ 2002ರಂತೆ ನೀವು ನಿಮ್ಮ ಪತಿಯವರ ಕೆಲಸಕ್ಕೆ ರಾಜೀನಾಮೆ ನೀಡಿದರೆ ಈ ಕುಟುಂಬ ಪಿಂಚಣಿ ಸೌಲಭ್ಯ ನಿಲ್ಲಿಸಲಾಗುವುದಿಲ್ಲ. ಆದರೆ, ನೀವು ಮರು ಮದುವೆಯಾದರೆ ಕುಟುಂಬ ಪಿಂಚಣಿಯನ್ನು ಸರ್ಕಾರವು ನಿಲ್ಲಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net