ಸರ್ಕಾರಿ ಕಾರ್ನರ್​: ಅನುಕಂಪದ ನೇಮಕಾತಿಗೆ ವಯೋಮಿತಿ..

corner
Published on
ದಿನದ ಪ್ರಶ್ನೆ

ನನ್ನ ಪತ್ನಿಯು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನೌಕರಿಯಲ್ಲಿದ್ದಾಗಲೇ ನಿಧನರಾಗಿದ್ದಾರೆ. ನಿಧನ ಕಾಲದಲ್ಲಿ ಆಕೆಯ ವಯಸ್ಸು 41 ಆಗಿದ್ದು, ನನಗೀಗ 42 ವರ್ಷ. ಅನುಕಂಪದ ಮೇರೆಗೆ ನೇಮಕವಾಗಲು ವಯೋಮಿತಿ ಎಷ್ಟು?

| ಎಚ್.ಎಸ್. ಸುನೀಲ್ ಮೈಸೂರು

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ನೇಮಕಾತಿ) ನಿಯಮಗಳು 1996ರ ರೀತ್ಯಾ ಬಾಳಸಂಗಾತಿಯಲ್ಲಿ ಒಬ್ಬರು ಸರ್ಕಾರಿ ಸೇವೆಯಲ್ಲಿದ್ದು, ನಿಧನರಾದರೆ ನಿಯಮ 3ರಂತೆ ಅನುಕಂಪದ ನೇಮಕಾತಿಗೆ ಅರ್ಹರು. ಈ ರೀತಿಯ ನೇಮಕಕ್ಕೆ ಗರಿಷ್ಠ 55ವರ್ಷ ಮೀರಿರಬಾರದು. ಆದ್ದರಿಂದ ನೀವು ಅನುಕಂಪದ ನೇಮಕಾತಿಗೆ ಅರ್ಹರಾಗಿರುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net