ಸರ್ಕಾರಿ ಕಾರ್ನರ್: ಮೂಲ ವೇತನದ ಬಗ್ಗೆ ಮಾಹಿತಿ

corner
Published on

ದಿನದ ಪ್ರಶ್ನೆ

25,800-58,400 ರೂ. ವೇತನ ಶ್ರೇಣಿಯಲ್ಲಿ 29,600 ರೂ. ಮೂಲ ವೇತನ ಪಡೆಯುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ.21,400-42,000 ವೇತನ ಶ್ರೇಣಿಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಲು ಆಯ್ಕೆ ಪ್ರಾಧಿಕಾರದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶವಿರುವ ಬಗ್ಗೆ ಹಾಗೂ ಆಯ್ಕೆಯಾದಲ್ಲಿ ನಿಗಧಿಯಾಗುವ ಮೂಲ ವೇತನದ ಬಗ್ಗೆ ಮಾಹಿತಿ ನೀಡಿ.

| ನಾರಾಯಣಸ್ವಾಮಿ ಕೆ. ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ (11)ರ ಮೇರೆಗೆ ಸರ್ಕಾರಿ ನೌಕರರು ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕು. ತದನಂತರ ಆ ಹುದ್ದೆಗೆ ಆಯ್ಕೆಯಾದರೆ, ನೇಮಕಾತಿ ಪ್ರಾಧಿಕಾರದಿಂದ ಈ ನಿಯಮಾವಳಿ ರೀತ್ಯಾ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗುತ್ತದೆ. ನೀವು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆಯಾಗಿದ್ದಲ್ಲಿ, ಆ ಹುದ್ದೆಗೆ ಹಾಜರಾದ ಮೇಲೆ ನಿಮ್ಮ ವೇತನವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 41(ಎ)ರ ಪ್ರಕಾರ ನಿಗದಿಪಡಿಸಲಾಗುತ್ತದೆ. ನಿಮ್ಮ ವೇತನವನ್ನು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಅದರ ವೇತನ ಶ್ರೇಣಿಗನುಸಾರವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಗದಿ ಪಡಿಸಲಾಗುವುದು. ಆದುದರಿಂದ ನಿಮಗೆ ವೇತನ ರಕ್ಷಣೆ ದೊರೆಯುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net