ಸರ್ಕಾರಿ ಕಾರ್ನರ್: ವೃಂದ ಬದಲಾವಣೆ ಅವಕಾಶ

corner
Published on
ದಿನದ ಪ್ರಶ್ನೆ 

ನಾನು ಬೆರಳಚ್ಚುಗಾರನಾಗಿ 2013ರ ಜೂ.5ರಂದು ನೇರನೇಮಕಾತಿ ಹೊಂದಿರುತ್ತೇನೆ. ನೇಮಕಾತಿ ಸಮಯದಲ್ಲಿ ಚಾಲ್ತಿಯಲ್ಲಿದ್ದ ನಿಯಮಾನುಸಾರ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ನಾನೀಗ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿದ್ದೇನೆ. ಪ್ರಸ್ತುತ ಈ ವೃಂದ ಬದಲಾವಣೆಗೆ ಪಿಯುಸಿ ತೇರ್ಗಡೆ ಕಡ್ಡಾಯವೇ? ಎಸ್​ಎಸ್​ಎಲ್​ಸಿ ವಿದ್ಯಾರ್ಹತೆ ಮೇಲೆ ವೃಂದ ಬದಲಾವಣೆ ಮಾಡಿಕೊಳ್ಳಬಹುದೇ?

| ರಮೇಶ್ ಬೆಂಗಳೂರು

1964ರ ಕರ್ನಾಟಕ ಸರ್ಕಾರಿ ಸೇವಾ (ಬೆರಳಚ್ಚುಗಾರರ ಮತ್ತು ದ್ವಿ.ದ.ಸ./ಕಿರಿಯರ) ವೃಂದ ಬದಲಾವಣಿಗೆ ಪಿಯುಸಿ ಕಡ್ಡಾಯವೆಂದು ತಿದ್ದುಪಡಿಯಾಗಿರುವುದಿಲ್ಲ. ದಿನಾಂಕ: 13-12-2013ರ ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಿಆಸುಇ 18 ಸೇವಸಿ 2013ರಲ್ಲಿ ನೇರ ನೇಮಕಾತಿಗೆ ಅಥವಾ ಡಿ ಗುಂಪಿನ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಿದೆ. ಆದೇ ದಿನಾಂಕ: 13-102-2013ಕ್ಕೆ ಮೊದಲು ಎಸ್​ಎಸ್​ಎಲ್​ಸಿಯಲ್ಲಿ ತೇರ್ಗಡೆಯಾದ ಡಿ ಗುಂಪಿನ ನೌಕರರಿಗೆ ಪದೋನ್ನತಿಗೆ ಅವಕಾಶ ಕಲ್ಪಿಸಿದೆ. ನೀವು ಈ ದಿನಾಂಕಕ್ಕೆ ಮೊದಲು ನೇಮಕವಾಗಿದ್ದು, ಮೇಲಿನ ವೃಂದ ಬದಲಾವಣೆ ನಿಯಮಕ್ಕೆ ವಿದ್ಯಾರ್ಹತೆ ಈವರೆಗೂ ತಿದ್ದುಪಡಿಯಾಗದ ಕಾರಣ ನೀವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆಗೆ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net