

ಸಮಾಜ ಕಲ್ಯಾಣ ಇಲಾಖೆಯಲ್ಲಿ ನಾನು ವಾರ್ಡನ್ ಆಗಿದ್ದು, ನನ್ನ ಪತ್ನಿಯೂ ಇದೇ ಇಲಾಖೆಗೆ ಒಂದೇ ತಾಲೂಕಿನ ಕಚೇರಿ ವ್ಯಾಪ್ತಿಯಲ್ಲಿ ವಾರ್ಡನ್ ಆಗಿದ್ದಾಳೆ. ಹಾಗಾಗಿ, ಇಬ್ಬರೂ ಮನೆ ಬಾಡಿಗೆ ಭತ್ಯೆ ಪಡೆಯಬಹುದೇ?
| ಬಿ.ಎಸ್.ಮಹಾದೇವ್ ಚಿತ್ರದುರ್ಗ
ದಿನಾಂಕ: 19.10.2012ರ ಸರ್ಕಾರಿ ಆದೇಶ ಸಂಖ್ಯೆ: ಆ.ಇ.18/ಎಸ್ಆರ್ಪಿ/ 2012ರ ಮೇರೆಗೆ ಒಂದೇ ಸ್ಥಳದಲ್ಲಿ ಪತಿ-ಪತ್ನಿ ಇಬ್ಬರೂ ವಾಸಿಸುತ್ತಿದ್ದರೆ, ಇಬ್ಬರಲ್ಲಿ ಒಬ್ಬರು ಮಾತ್ರ ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಈ ಭತ್ಯೆಯನ್ನು ಸರ್ಕಾರಿ ನೌಕರನ ವಾಸಸ್ಥಾನ ಪರಿಗಣಿಸದೇ ಕರ್ತವ್ಯದ ಸ್ಥಳಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಲಾಗುತ್ತದೆ.