ಸರ್ಕಾರಿ ಕಾರ್ನರ್​ | ಅನುಕಂಪದ ಮೇರೆಗೆ ನೇಮಕಾತಿ

corner
Published on
ದಿನದ ಪ್ರಶ್ನೆ 

ನನ್ನ ತಂದೆ ಸರ್ಕಾರಿ ನೌಕರಿಯಲ್ಲಿರುವಾಗಲೇ ನಿಧನರಾಗಿದ್ದಾರೆ. ನನ್ನ ತಾಯಿ ಗೃಹಿಣಿ. ಅಕ್ಕನಿಗೆ ವಿವಾಹವಾಗಿದ್ದು, ಇನ್ನೊಬ್ಬ ಸಹೋದರಿ ಬಿ ಗ್ರೂಪ್ ನೌಕರಿಯಲ್ಲಿದ್ದಾಳೆ. ನಾನು ಮತ್ತು ನನ್ನ ತಮ್ಮ ನಿರುದ್ಯೋಗಿಯಾಗಿರುತ್ತೇವೆ. ನಮ್ಮ ತಂದೆ ಸಿ ಗ್ರೂಪ್ ನೌಕರರಾಗಿದ್ದುದರಿಂದ ನನಗೆ ಅನುಕಂಪದ ಮೇರೆಗೆ ನೇಮಕಾತಿ ಲಭ್ಯವಾಗುತ್ತದೆಯೇ? ಆದಾಯ ಮಿತಿ ಇದೆಯೇ?

| ರಾಹುಲ್ ಕೋನಾಪುರ ಬೆಳಗಾವಿ

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಾವಳಿಯ ನಿಯಮ 3ರಂತೆ ನೀವು ನೇಮಕಾತಿ ಅರ್ಹರು. ದಿನಾಂಕ: 09-04-2021ರಿಂದ ಜಾರಿಗೆ ಬರುವಂತೆ ನಿಯಮ 4ರಲ್ಲಿರುವ ಆದಾಯಮಿತಿಗೆ ತಿದ್ದುಪಡಿಗೊಳಿಸಿ ಸಿ ಮತ್ತು ಡಿ ಗುಂಪಿನ ನಿಧನರಾದ ನೌಕರರಿಗೆ ವಿನಾಯತಿ ನೀಡಿದೆ. ಆದ್ದರಿಂದ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ದಿನಾಂಕ: 27-10-2017ರ ಪ್ರಕಾರ ಸಿ ಗುಂಪಿನ ಹುದ್ದೆಗೆ ಅನುಕಂಪದ ಮೇರೆಗೆ ನೇಮಕಾತಿಗೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net