

ಬೆಂಗಳೂರು: ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಪತ್ನಿ ಮೇಘನಾ ಅವರಿಗೆ ಇಂದು ಡೆಲಿವರಿ ಆಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಜೂ.ಚಿರುನನ್ನು ಸ್ವಾಗತಿಸಲು ಸಜ್ಜಾಗಿರುವ ಆಸ್ಪತ್ರೆ ಸಿಬ್ಬಂದಿ ವಾರ್ಡ್ನಲ್ಲಿ ಚಿರು ಮತ್ತು ಮೇಘನಾ ಫೋಟೋಗಳನ್ನು ಇಟ್ಟು ಮನೆಯಂತೆ ರೆಡಿ ಮಾಡಿದ್ದಾರೆ.
ತುಂಬು ಗರ್ಭಿಣಿ ಮೇಘನಾ ರಾಜ್ ನಗರದ ಅಕ್ಷ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಕೆಲ ದಿನಗಳಿಂದ ಮೇಘನಾಗಾಗಿಯೇ ಈ ವಾರ್ಡ್ ಮೀಸಲಿಟ್ಟಿರುವ ಆಸ್ಪತ್ರೆ, ವಾರ್ಡ್ ಅನ್ನು ಸಿಬ್ಬಂದಿ ಮನೆಯಂತೆ ರೆಡಿ ಮಾಡಿದ್ದಾರೆ.
ಚಿರು ಅಗಲಿಕೆ ನಂತರ ಪ್ರತಿಕ್ಷಣ ಚಿರು ನೆನಪಲ್ಲೇ ಕಳೆಯುತ್ತಿರುವ ಮೇಘನಾ, ಚಿರು ಕಟೌಟ್ ನಿಲ್ಲಿಸಿಕೊಂಡೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದರು. ಚಿರು ಆಸೆಯನ್ನು ಸರ್ಜಾ ಕುಟುಂಬ ಒಂದೊಂದೇ ನೆರವೇರಿಸುತ್ತಿದೆ.
2017ರ ಅಕ್ಟೋಬರ್ 22ರಂದು ಚಿರು ಮತ್ತು ಮೇಘನಾರ ಎಂಗೇಜ್ಮೆಂಟ್ ಅದ್ದೂರಿಯಾಗಿ ನೆರವೇರಿತ್ತು. ವಿಶೇಷ ಅಂದ್ರೆ ಈಗ ಅದೇ ದಿನ ಜೂ.ಚಿರು ಜನಿಸಲಿದೆ ಎನ್ನಲಾಗಿದೆ.