ಬೇಡಿಕೆ ಈಡೇರಿಸದಿದ್ದರೆ ಸಾರಿಗೆ ನೌಕರರ ಮುಷ್ಕರ: ಎಚ್ಚರಿಕೆ

Published on

ಬೆಂಗಳೂರು:
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಕಾಲ ನಿಗಧಿ ಮಾಡಬೇಕು. ಇಲ್ಲದೆ ಇದ್ದರೆ, ನಾವೇ ದಿನಾಂಕ ನಿಗಧಿ ಮಾಡಿ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿ ಎಚ್ಚರಿಕೆ ನೀಡಿದೆ.
ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಂಟಿ ಕ್ರೀಯಾ ಸಮಿತಿ ತಮ್ಮ ಹಕ್ಕೋತ್ತಯ ಮಂಡಿಸಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟ್ಾ ಅಂಡ್ ವರ್ಕರ್ಸ್‌ ೆಡರೇಷನ್‌ನ ಎಚ್.ವಿ.ಅನಂತಸುಬ್ಬರಾವ್, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಬೇಡಿಕೆ ಈಡೇರಿಸಬೇಕು. ಇಲ್ಲದೆ ಇದ್ದರೆ ಪ್ರತಿಭಟನೆ ಅನಿವಾರ್ಯ ಎನ್ನುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದರು.
ಕಡಿಮೆ ನೌಕರರು ಇದ್ದರೂ ಕೂಡ ಸರ್ಕಾರ ಜಾರಿಗೆ ತಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಇದನ್ನು ಸರ್ಕಾರ ಗಮನಿಸಬೇಕು. ಸಂಸ್ಥೆಗೆ ನಷ್ಟವಾಗಿದೆ ಎಂದು ನೌಕರರಿಗೆ ಬರೆ ಹಾಕಬಾರದು ಎಂದರು.
ಸಾರಿಗೆ ನೌಕರರ ಮೂಲ ವೇತನಕ್ಕೆ ಶೇ.25ರಷ್ಟು ಹೆಚ್ಚಳ ಮಾಡಬೇಕು. ವೈದ್ಯಕೀಯ ಭತ್ಯೆ ಸೇರಿದಂತೆ ವಿವಿಧ ಭತ್ಯಗಳನ್ನು ಕೂಡಲೆ ಹೆಚ್ಚಿಸಬೇಕು. 2023 ರ ಅವಧಿಗೆ ನೌಕರರಿಂದ ಕಡಿತಗೊಳಿಸಿದ್ದ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಮರು ಪಾವತಿ ಮಾಡಬೇಕು. ಎಲ್ಲಾ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಜಂಟಿಕ್ರೀಯಾ ಸಮಿತಿ ಪದಾಧಿಕಾರಿಗಳಾದ ಜಯದೇವರಾಜೇ ಅರಸು, ಎಚ್.ಡಿ.ರೇವಪ್ಪ, ಮಂಜುನಾಥ್, ವೆಂಕಟರವಣಪ್ಪ, ಸೋಮಣ್ಣ ಮತ್ತಿತರರು ಹಾಜರಿದ್ದರು.

ಸಚಿವರ ಅಧ್ಯಕ್ಷತೆಯಲ್ಲಿ ಸಭೆ:
ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನೌಕರರ ನಾನಾ ಸಂಘಟನೆಗಳ ಅಹವಾಲನ್ನು ಆಲಿಸಿದರು. ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net