ಐಟಿ ದಾಳಿ ಬಳಸಿ ವ್ಯಂಗ್ಯ; ಕಾಂಗ್ರೆಸ್​ನಿಂದ ದೂರು

bjp vs congress
Published on

ಬೆಂಗಳೂರು: ಐಟಿ ದಾಳಿಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಹಾಗೂ ಕೆಲವು ಜಾಲತಾಣದ ಪುಟಗಳಲ್ಲಿ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯ ಚಿತ್ರ ಬಿಡಿಸಿ ಅವಹೇಳನ ಮಾಡಲಾಗುತ್ತಿದೆ, ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕೆಪಿಸಿಸಿ ವಕ್ತಾರರು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಐಟಿ ದಾಳಿಯಲ್ಲಿ ದೊರೆತ ಹಣ ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಲು ಸಂಗ್ರಹಿಸಲಾಗಿದೆ ಎಂಬಂತೆ ಬಿಂಬಿಸಿಸುಳ್ಳು ಮಾಹಿತಿ ಹಾಕಿ, ಸಿಎಂ ಹಾಗೂ ಡಿಸಿಎಂ ಚಿತ್ರ ವಿರೂಪಗೊಳಿಸಿ ಅಪ್ಲೋಡ್ ಮಾಡಲಾಗಿದೆ. ಬಿಜೆಪಿ ಕರ್ನಾಟಕ ಹಾಗೂ ಇತರರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹಾಗೂ ಪ್ರಚೋದಿಸುವ ಕಾರ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಕರ್ನಾಟಕ, ನಿರ್ಮಲ್ ಕುಮಾರ್ ಸುರಾನ, ಮಹೇಶ್ ಮುದ್ನಾಳ್, ಮೌನೇಶ್ ಮನು ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net