ಹಸಿರೀಕರಣ ಹೆಸರಲ್ಲಿ ಸಸಿಗಳು ಹಾಳು

sgr protest (2)
ಬೆಳಂದೂರು ಗ್ರಾಮದಲ್ಲಿ ಹಸರೀಕರಣ ಹೆಸರಿನಲ್ಲಿ ಸಸಿಗಳನ್ನು ಹಾಳು ಮಾಡಿದೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘದ (ಗಣಪತಿಯಪ್ಪ ಸ್ಥಾಪಿತ) ಪದಾಧಿಕಾರಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ರಮೇಶ್, ಹೊಯ್ಸಳ ಗಣಪತಿಯಪ್ಪ, ಜಗದೀಶ್, ದೇವರಾಜ್, ಸುರೇಶ್ ಇತರರಿದ್ದರು.
Published on

ಸಾಗರ: ಸಾಗರ ತಾಲೂಕು ಬೆಳಂದೂರು ಗ್ರಾಮದ ಸ.ನಂ.35ರಲ್ಲಿ ಅರಣ್ಯ ಇಲಾಖೆ ಹಸರೀಕರಣ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಸಸಿಗಳನ್ನು ಹಾಳು ಮಾಡಿದೆ ಎಂದು ಜಿಲ್ಲಾ ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಸ್ಥಾಪಿತ) ಪದಾಧಿಕಾರಿಗಳು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಸಸಿಗಳನ್ನು ರಾಶಿ ಹಾಕಿ ಪ್ರತಿಭಟನೆ ನಡೆಸಿದರು.

ಸ.ನಂ. 35ರಲ್ಲಿ ಗಿಡಗಳನ್ನು ನೆಡದೆ ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಹಸರೀಕರಣ ಮಾಡಿದ್ದೇವೆ ಎಂದು ಲೆಕ್ಕ ತೋರಿಸುವ ಅರಣ್ಯ ಇಲಾಖೆ ಗಿಡಗಳನ್ನು ಎಸೆಯುವ ಮೂಲಕ ಸರ್ಕಾರದ ಹಣ ನಷ್ಟಗೊಳಿಸಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಅರಣ್ಯ ಇಲಾಖೆಯನ್ನು ಸರಿಯಾಗಿ ನಿಭಾಯಿಸಲು ವಿಫಲವಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಈ ಭ್ರಷ್ಟಾಚಾರದಲ್ಲಿ ಸಣ್ಣವರಿಂದ ಹಿಡಿದು ದೊಡ್ಡ ಅಧಿಕಾರಿಗಳವರೆಗೂ ಶಾಮೀಲಾಗಿರುವ ಶಂಕೆ ಇದೆ. ಇದನ್ನು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹೊಯ್ಸಳ ಗಣಪತಿಯಪ್ಪ, ಜಗದೀಶ್, ದೇವರಾಜ್, ಸುರೇಶ್, ಶಿವಕುಮಾರ್, ಸಂತೋಷ್, ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net