ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್​: Santosh Lad

Santosh Lad
Published on

ಧಾರವಾಡ: ಹಿಂದೂ ಪದವನ್ನು ತಂದಿದ್ದೆ ಕಾಂಗ್ರೆಸ್​ನವರು ಅಲ್ಲಿಯವರೆಗೂ ಈ ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಎಂದು ಸಚಿವ ಸಂತೋಷ್ ಲಾಡ್ (Santosh Lad) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಧಾರವಾಡದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ತೊಗಲು ಬೊಂಬೆಯಾಟ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚೊವ ಸಂತೋಷ್​ ಲಾಡ್, ಡಾ ಅಂಬೇಡ್ಕರರು ಹಿಂದೂ ಕೋಡಿಫಿಕೇಶನ್ ಬಿಲ್ ತರದೇ ಇದ್ದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಶೂದ್ರರನ್ನು ಕರೆಯಿರಿ, ಬ್ರಾಹ್ಮಣ, ವೈದ್ಯರನ್ನು ಕರೆಯಿಸಿ ಎಂಬ ವ್ಯವಸ್ಥೆ ಇರುತ್ತಿತ್ತು ಎಂದು ಹೇಳಿದ್ದಾರೆ.

ಇತಿಹಾಸವನ್ನು ಜನ ಓದುವುದಿಲ್ಲ. ಮಾಧ್ಯಮಗಳ ಮೂಲ ಹಿಂದೂಗಳು ದೊಡ್ಡ ಸುಳ್ಳು ಹೇಳುವುದೇ ಇವತ್ತಿನ ರಾಜಕಾರಣದಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯವರು ಬೈಯುತ್ತಾರೆ. ನಮ್ಮ ಬಗ್ಗೆ ಹಿಗ್ಗಾಮುಗ್ಗಾ ಇಲ್ಲಸಲ್ಲದ ಮಾತು ಮಾತನಾಡುತ್ತಾರೆ. ಜನರು ಸಹ ಕಾಂಗ್ರೆಸ್ ಅರ್ಧ ಮಾಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಸಂತೋಷ್​ ಲಾಡ್​ (Santosh Lad) ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net