ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 12 ವಲಯಗಳನ್ನು ಒಳಗೊಂಡ ಕೆಥೋಲಿಕ್ ಸಭಾ ಸಂಸ್ಥೆಯಲ್ಲಿ 81 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸ್ಟೀವನ್ ರಾಡ್ರಿಗಸ್ ವಲೆನ್ಸಿಯಾ, ಆಲ್ಬರ್ಟ್ ಸುನೀಲ್ ಮೋನಿಸ್, ಕಾರ್ಯದರ್ಶಿಯಾಗಿ ವಿಲ್ಮಾ ಮೊಂತೆರೊ ದೇರೆಬೈಲ್, ಜತೆ ಕಾರ್ಯದರ್ಶಿಯಾಗಿ ಟ್ರೆಸಿ ರಾಡ್ರಿಗಸ್ ಅಮ್ಮೆಂಬಳ, ಖಜಾಂಚಿಯಾಗಿ ಫ್ರಾನ್ಸಿಸ್ ಮೊಂತೆರೊ, ಸಹ ಖಜಾಂಚಿಯಾಗಿ ಸ್ಟ್ಯಾನಿ ಮಿರಾಂಡ ನೀರುಡೆ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಆಧ್ಯಾತ್ಮಿಕ ನಿರ್ದೇಶಕ ಡಾ.ಜೆ.ಬಿ.ಸಲ್ಡಾನಾ ಉಪಸ್ಥಿತರಿದ್ದರು.