

ಧಾರವಾಡ: ಸಂಸ್ಕೃತ ವಿದ್ವಾಂಸ ಪಂ.ಜಯತೀರ್ಥ ಆಚಾರ್ಯ ಮಳಗಿ(73) ಅವರು ಭಾನುವಾರ ನಿಧನರಾದರು.
ಉತ್ತರ ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾಗಿದ್ದ ಪಂ. ಜಯತೀರ್ಥ ಆಚಾರ್ಯ ಮಳಗಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿದ್ದರು. ವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿದ್ದಾರೆ.
1949ರ ಜೂನ್ 5ರಂದು ಜನಿಸಿದ್ದ ಪಂ. ಜಯತೀರ್ಥ ಆಚಾರ್ಯ ಮಳಗಿ ಅವರು ಧಾರವಾಡವನ್ನು ಮಾಧ್ವಸಿದ್ಧಾಂತದ ಕೇಂದ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.