ಧೋತಿ-ಕುರ್ತಾ ಧರಿಸಿ ಕ್ರಿಕೆಟ್; ಗೆದ್ದರೆ ಅಯೋಧ್ಯೆ ಪ್ರವಾಸ

Sanskrit-Speaking Vedic Pandits Take Part In Cricket Competition Top Prize Is Ayodhya Trip
Published on

ಮಧ್ಯಪ್ರದೇಶ:  ವೈದಿಕ ಪಂಡಿತರು ಸಾಂಪ್ರದಾಯಿಕ ಧೋತಿ-ಕುರ್ತಾ ಉಡುಗೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಭೋಪಾಲ್ ನಗರದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಸಂಸ್ಕೃತವನ್ನು ಉತ್ತೇಜಿಸುವ ಉದ್ದೇಶದ ಭಾಗವಾಗಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಿಗೆ ಅತೀಂದ್ರಿಯ ಧ್ಯಾನದ ಅಭ್ಯಾಸವನ್ನು ನೀಡಿದ ಮಹರ್ಷಿ ಮಹೇಶ್ ಯೋಗಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಮಹರ್ಷಿ ಮೈತ್ರಿ ಹೆಸರಿನಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಶುಕ್ರವಾರದಂದು ಭೋಪಾಲ್‌ನ ಅಂಕುರ್ ಮೈದಾನದಲ್ಲಿ ಪಂದ್ಯಾವಳಿ ಆರಂಭವಾಯಿತು. ನಾಲ್ಕು ದಿನಗಳ ಕಾಲ ನಡೆಯಲಿದೆ. ಆಟಗಾರರು ಮತ್ತು ಅಂಪೈರ್‌ಗಳು ನಿರರ್ಗಳವಾಗಿ ಸಂಸ್ಕೃತವನ್ನು ಮಾತನಾಡುತ್ತಾರೆ. ಔಟ್‌ಗಳು, ಮಿಸ್‌ಫೀಲ್ಡ್‌ಗಳು, ಕ್ಯಾಚ್‌ಗಳನ್ನು ಸಹ ಸಂಸ್ಕೃತ ಭಾಷೆಯಲ್ಲಿ ವಿವರಿಸಲಾಗಿದೆ.

ಮಹರ್ಷಿ ಮೈತ್ರಿ ಸಮಿತಿ ಸದಸ್ಯ ಅಂಕುರ್ ಪಾಂಡೆ ಮಾತನಾಡಿ, ಈ ಪಂದ್ಯಾವಳಿಯ ವಿಜೇತರನ್ನು ಜ.22ರಂದು ರಾಮಾಲಯ ಉದ್ಘಾಟನೆ ಬಳಿಕ ಅಯೋಧ್ಯೆಗೆ ಕರೆದೊಯ್ಯಲಾಗುವುದು. ವಿಜೇತರಿಗೆ ರೂ.21 ಸಾವಿರ ನಗದು ಪ್ರೋತ್ಸಾಹಧನ ಹಾಗೂ ರನ್ನರ್ ಅಪ್ ಗೆ ರೂ.11 ಸಾವಿರ ನಗದು ಪ್ರೋತ್ಸಾಹಧನ ನೀಡಲಾಗುವುದು. ಟೂರ್ನಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಈ ಟೂರ್ನಿಯಲ್ಲಿ ಭೋಪಾಲ್ ನ ನಾಲ್ಕು ತಂಡಗಳು ಸೇರಿ ಒಟ್ಟು 12 ತಂಡಗಳು ಭಾಗವಹಿಸಿವೆ ಎಂದು ವಿವರಿಸಿದರು. 

ಸಂಘಟಕರು ಮಾತನಾಡಿ, ವೈದಿಕ ಮನೆತನದಲ್ಲಿ ಸಂಸ್ಕೃತ ಹಾಗೂ ಕ್ರೀಡಾ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಹುಮಾನಗಳಲ್ಲದೆ, ಆಟಗಾರರಿಗೆ ವೇದ ಪುಸ್ತಕಗಳು ಮತ್ತು 100 ವರ್ಷಗಳ ಪಂಚಾಂಗವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net