

ರಾಣೆಬೆನ್ನೂರ: ತಾಲೂಕಿನ ಕುಪ್ಪೇಲೂರ ರಂಗ ಚೇತನ (ಪ.ಜಾ) ಸಂಸ್ಥೆ ವತಿಯಿಂದ 11ನೇ ವರ್ಷದ ವಾಷಿರ್ಕೋತ್ಸವ ನಿಮಿತ್ತ ಸಾಂಸತಿಕ ರಂಗ ಸಂಗಮ ವೈಭವ ಕಾರ್ಯಕ್ರಮ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ರತ್ನ ಮಾಂಗಲ್ಯ ಎಂಬ ಕೌಟುಂಬಿಕ ನಾಟಕ ಪ್ರದರ್ಶನ ಡಿ. 15ರಂದು ಸಂಜೆ 5ಕ್ಕೆ ನಗರದ ಬಿಎಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಜರುಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಗಣೇಶ ಗುಳಗುಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮಾರಂಭ ಉದ್ಘಾಟಿಸುವರು. ಧಾರವಾಡ ರಂಗಾಯಣ ಹಾಗೂ ರಂಗಭೂಮಿ ನಿರ್ದೇಶಕ ರಾಜು ತಾಳಿಕೋಟಿ, ಬಿಎಜೆಎಸ್ ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕಲಾವಿದರಾದ ರುದ್ರೇಶ ಬಡಿಗೇರ, ಡಾ. ಕೆ.ಸಿ. ನಾಗರಜ್ಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.