ಸಂಕ್ರಾಂತಿ ನಿಮಿತ್ತ ತುಂಗಭದ್ರಾ ನದಿಪಾತ್ರ ಸ್ವಚ್ಛಗೊಳಿಸಿದ ಸಂಘಟಕರು

17-RNR-03
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಸಂಕ್ರಾಂತಿ ನಿಮಿತ್ತ ಬಂದಿದ್ದ ಪ್ರವಾಸಿಗರು ಬಿಸಾಕಿದ್ದ ಬಟ್ಟೆ, ನೀರಿನ ಬಾಟಲ್ ಸೇರಿ ಸಮಗ್ರ ತಾಜ್ಯವನ್ನು ಧನ್ಯೋಸ್ಮಿ ಭರತಭೂಮಿ ತಂಡದ ಸದಸ್ಯರು ಸ್ವಚ್ಛಗೊಳಿಸಿದರು.
ಸಂಘಟನೆಯ ಪ್ರಮುಖರಾದ ಚರಣ ಅಂಗಡಿ, ವಿಜಯ ಉದಗಟ್ಟಿ, ಮಧು ಚಳಗೇರಿ, ಮಹೇಶ ಜಿ., ಕೃಷ್ಣ ಕಮ್ಮಾರ, ಮಾನಸಾ ಕಮ್ಮಾರ, ಸ್ನೇಹಾ, ಕಿರಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net