ಬಿಜೆಪಿ ಕಾರ್ಯಕರ್ತರು ಗ್ಯಾರಂಟಿಗಳನ್ನು ಬಹಿಷ್ಕರಿಸಲಿ: ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಸವಾಲು

sanket yenagi
Published on

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದು ತನ್ನ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿದೆ. ಈ ನಡುವೆ ಇದೀಗ ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ, ಬಿಜೆಪಿ ಕಾರ್ಯಕರ್ತರು ಗ್ಯಾರಂಟಿ ಬಹಿಷ್ಕರಿಸಲಿ ಎಂದು ಸವಾಲು ಹಾಕಿದ್ದಾರೆ.

ಸಂಕೇತ್ ಏಣಗಿ ಮಾಜಿ ಸಿಎಂ ಬೊಮ್ಮಾಯಿಯನ್ನು ಕೆಣಕಿದ್ದು “ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಕೊಟ್ಟ 5 ಗ್ಯಾರಂಟಿಗಳನ್ನು ವಿರೋಧಿಸಿ ಗೇಲಿ ಮಾಡುತ್ತಿದ್ದರು. ದಮ್ಮು-ತಾಕತ್ತು ಎನ್ನುತ್ತಿದ್ದ ಬಸವರಾಜ ಬೊಮ್ಮಾಯಿಯವರು ಕೂಡಲೇ ಬಿಜೆಪಿಯ ಕಾರ್ಯಕರ್ತರಿಗೆ 5 ಗ್ಯಾರಂಟಿಗಳನ್ನು ಬಹಿಷ್ಕರಿಸಲು ಕರೆ ನೀಡಲಿ. ಈ ಮೂಲಕ ತಮ್ಮ ದಮ್ಮು-ತಾಕತ್ತು ಪ್ರದರ್ಶಿಸಲಿ. ಇಲ್ಲವೇ, ರಾಜ್ಯದ ಜನತೆಯ ಕ್ಷಮೆ ಯಾಚಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net