ಆರೋಗ್ಯ ಸಂಜೀವಿನಿ ಯೋಜನೆ ಜಾರಿ: ಫಸ್ಟ್​ ರಿಯಾಕ್ಷನ್ ಕೊಟ್ಟ​ ನೌಕರರ ಸಂಘದ ಅಧ್ಯಕ್ಷ ಸಿ.ಎನ್​.ಷಡಕ್ಷರಿ | Sanjeevini Scheme

untitled-design-2025-09-23t214854657-68d2c87c6e39b
Published on

Sanjeevini Scheme: ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ''ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'' ಯನ್ನು ಇದೇ ಅ.1ರಂದು ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಇದೀಗ ಘೋಷಿಸಿದೆ.

ಈ ಯೋಜನೆಗೆ ಸರ್ಕಾರಿ ನೌಕರರ ಸಂಬಳದಿಂದ ಮಾಸಿಕ ವಂತಿಕೆಯನ್ನು ಕಡಿತಗೊಳಿಸಲಾಗುವುದು. ಅಕ್ಟೋಬರ್ 2025ರ ವೇತನದಿಂದ ಈ ವಂತಿಕೆ ಕಡಿತ ಆರಂಭವಾಗಲಿದೆ ಎಂದು ಅನುಷ್ಠಾನದ ಸೂಚನೆಯಲ್ಲಿ ತಿಳಿಸಲಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿದ್ದು, ನೌಕರರ ವರ್ಗವಾರು ವಂತಿಗ ಕಡಿತ ವಿವರ ಇಲ್ಲಿದೆ..

ಗ್ರೂಪ್ ಎ: 1,000

ಗ್ರೂಪ್ ಬಿ: 500

ಗ್ರೂಪ್ ಸಿ: 350

ಗ್ರೂಪ್ ಡಿ: 250

ಈ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಅಕ್ಟೋಬರ್‌ನಿಂದಲೇ ಇದರ ಪ್ರಯೋಜನಗಳು ಲಭ್ಯವಾಗಲಿವೆ.

ನೌಕರರ ಸಂಘದ ಅಧ್ಯಕ್ಷ  ಷಡಕ್ಷರಿ ಪ್ರತಿಕ್ರಿಯೆ

ಬಹಳ ವರ್ಷಗಳ ಯೋಜನೆಯದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1ರಂದು ಜಾರಿಗೆ ಬರಲಿದ್ದು, ಈ ಯೋಜನೆಯು 6 ಲಕ್ಷ ನೌಕರರು ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 25 ಲಕ್ಷ ಸದಸ್ಯರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ. ಯೋಜನೆ ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎನ್​. ಷಡಕ್ಷರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net