

ಬೆಂಗಳೂರು: 'ಮಾದಕ' ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಬೆನ್ನಲ್ಲೇ ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರನ್ನು ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡ್ರಗ್ಸ್ ಕೇಸ್ನಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೆ.8ರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ಸಂಜನಾರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಬುಧವಾರ ಸಂಜೆ 4ರ ಸುಮಾರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಧೀಶರು ನಟಿ ಸಂಜನಾಗೆ 2 ದಿನ ಅಂದರೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿರಿ ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
ಡ್ರಗ್ಸ್ ಪೆಡ್ಲರ್ ರಾಹುಲ್, ಸಂಜನಾರ ರಾಖಿ ಬ್ರದರ್. ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಕ್ಯಾಸಿನೋ ಶೇಖ್ ಫಾಝಿಲ್ನ ಪಾರ್ಟಿಗಳಲ್ಲಿ ಸಂಜನಾ ಪಾಲ್ಗೊಂಡಿದ್ದರು. ಡ್ರಗ್ಸ್ ದಂಧೆಗೂ ಸಂಜನಾಗೂ ಲಿಂಕ್ ಇರುವ ಹಾಗೂ ಡ್ರಗ್ಸ್ ಕೇಸ್ನ ಇತರ ಆರೋಪಿಗಳ ಹೇಳಿಕೆ ಮೇರೆಗೆ ಗಲ್ರಾನಿಯನ್ನು ಸಿಸಿಬಿ ಬಂಧಿಸಿದೆ.
ಬುಧವಾರ ಬೆಳಗ್ಗೆಯೇ ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.