ಉದಾರಹಳ್ಳಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣ

12 KKP 1
Published on

ಕನಕಪುರ : ಐವರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಸೋಮೇದ್ಯಾಪನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಉದಾರಹಳ್ಳಿಯಲ್ಲಿ ಗ್ರಾಪಂ ವತಿಯಿಂದ ಸ್ಯಾನಿಟೈಸೇಷನ್ ಮಾಡಲಾಯಿತು.

ಗ್ರಾಪಂ ಸದಸ್ಯ ಜೀವನ್‌ಕುಮಾರ್ ಮಾತನಾಡಿ, ನಗರದಂತೆಯೇ ಗ್ರಾಮೀಣ ಪ್ರದೇಶದಲ್ಲೂ ಸೋಂಕು ಹೆಚ್ಚಾಗುತ್ತಿದೆ. ಸೋಂಕಿತರಲ್ಲಿ ಇಬ್ಬರು ಹೋಂ ಕ್ವಾರಂಟೈನ್‌ನಲ್ಲಿದದು, ಉಳಿದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದ ಅವರು, ಕರೊನಾ ನಿಯಂತ್ರಣಕ್ಕಾಗಿ ನಾಗರಿಕರು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಪಿಡಿಒ ಮುನಿರಾಜು, ಗ್ರಾ.ಪಂ. ಸದಸ್ಯೆ ಮಂಗಳ, ಕರವಸೂಲಿಗಾರ ಕಾಂತರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net