ಕಲೆಯ ಜ್ಞಾನಾಭಿವೃದ್ಧಿಗೆ ಸರಣಿ ಕಾರ್ಯಕ್ರಮ

art programe
ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಭಗವತಿಪುರದಲ್ಲಿ ಏರ್ಪಡಿಸಿದ್ದ ನೃತ್ಯ ಪ್ರಸ್ತುತಿ ಭರತನಾಟ್ಯ ಅರಿವು ಕಾರ್ಯಕ್ರಮವನ್ನು ಭರತನಾಟ್ಯ ವಿದ್ಯಾರ್ಥಿಗಳು ಉದ್ಘಾಟಿಸಿದರು. ನಯನಾ, ಶ್ರೀಪ್ರಸಾದ್, ಯಜ್ಞಪುರುಷಭಟ್, ಭಾರ್ಗವ್, ಮೇಘನಾ ಇದ್ದರು.
Published on

ಬಾಳೆಹೊನ್ನೂರು: ಮಕ್ಕಳಲ್ಲಿ ಕಲೆಯ ಜ್ಞಾನಾಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಉತ್ಥಾನ ಎಂಬ ಶೀರ್ಷಿಕೆಯಡಿ ಹಲವು ಆಯಾಮಗಳಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶ್ರೀವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಮುಖ್ಯಸ್ಥೆ ನಯನಾ ಶ್ರೀಪ್ರಸಾದ್ ತಿಳಿಸಿದರು.
ಸಮೀಪದ ಸಂಗಮೇಶ್ವರಪೇಟೆ ಭಗವತೀಪುರದ ಶ್ರೀ ವಿಜಯ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ನೃತ್ಯ ಪ್ರಸ್ತುತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭರತನಾಟ್ಯ ವಿಶೇಷ ಕಲೆಯಾಗಿದ್ದು ಇದರಲ್ಲಿ ಆಸಕ್ತಿ ಹೊಂದಿ ಹಲವು ಸಾಧನೆಗಳನ್ನು ಮಾಡಬಹುದು. ನೃತ್ಯ ಪ್ರಾಕಾರಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ. ಭರತನಾಟ್ಯ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸಾಧನೆ ಮಾಡಬೇಕು ಎಂದು ಹೇಳಿದರು. ವಿಜಯ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯಸ್ಥ ಶ್ರೀಪ್ರಸಾದ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್, ಭರತನಾಟ್ಯ ಶಿಕ್ಷಕ ಭಾರ್ಗವ್ ಶರ್ಮಾ, ಮೇಘನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net