ಸಂಡೂರಿನಲ್ಲಿ ​ಕಾಂಗ್ರೆಸ್‌ನ ಅನ್ನಪೂರ್ಣಗೆ ಗೆಲುವು ! ಸೋಲು ಒಪ್ಪಿಕೊಂಡ BJP ಅಭ್ಯರ್ಥಿ ಬಂಗಾರು ಹನುಮಂತು..Sandur Bypoll Congress

sandur bypoll congress
Published on

Sandur Bypoll Congress : ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಸೋಲಿನತ್ತ ಸಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಸೋಲೊಪ್ಪಿಕೊಂಡಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಸುತ್ತು ಮತ ಎಣಿಕೆ ನಡೆಯಬೇಕಿದೆ. ಇದರಲ್ಲಿ ಈಗಾಗಲೇ 16 ಸುತ್ತುಗಳ ಮತ ಎಣಿಕೆ ಆಗಿದೆ. ಇನ್ನೇನು 3 ಸುತ್ತುಗಳು ಮಾತ್ರ ಇದೆ.

16 ಸುತ್ತುಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ದಾಖಲಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರ ಬಳಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ‘ಕೈ’ ನಾಯಕರ ಪರ ಜೈಕಾರ ಹಾಕಿದ್ದಾರೆ.

ಬಂಗಾರು ಹನುಮಂತ, ಧರ್ಮದ ವಿರುದ್ಧ ಅಧರ್ಮ ಗೆದ್ದಿದೆ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್‌ ಹಣ ಬಲದಿಂದ ಗೆದ್ದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net