

ಸಂಡೂರು : ಬಂಗಾರು ಹನುಮಂತು ಗೆಲುವು ಬಿಜೆಪಿ ಗೆಲುವು ಅಲ್ಲ ಸಂಡೂರು ಜನತೆಯ ಗೆಲುವು. ನಾಲ್ಕು ಬಾರಿ ಗೆದ್ದರೂ ತುಕಾರಾಮ್ ಕೈಯಲ್ಲಿ ಅಭಿವೃದ್ಧಿ ಆಗದೇ ಇರುವುದು ಸಂಡೂರಿನ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ತಾಲೂಕಿನ ಚೋರನೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಪಕ್ಷದಿಂದ ನಡೆದ ಯುವ ಸಮಾವೇಶದಲ್ಲಿ ಮಾತನಾಡಿದರು. ಸಂಡೂರಿನಲ್ಲಿ ಕನಿಷ್ಠ ಬಸ್ ನಿಲ್ದಾಣ ಮಾಡೋಕೆ ಅಗಿಲ್ಲ. ಶಿಕಾರಿಪುರಕ್ಕೆ ಬಂದು ಒಮ್ಮೆ ನೋಡಿ, ಅಭಿವೃದ್ಧಿ ಹೇಗೆ ಮಾಡಬೇಕು ಎಂದು ಗೊತ್ತಾಗುತ್ತೆ ಎಂದರು.
ಕಾಂಗ್ರೆಸ್ ಪಕ್ಷದ ಯೋಗ್ಯತೆಗೆ ಕನಿಷ್ಠ ಅಭಿವೃದ್ಧಿ ಮಾಡೋಕೆ ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಸೋಲಿಸಲೇಕೆಂದು ವಾಲ್ಮೀಕಿ ನಿಗಮದಲ್ಲಿನ ಹಣ ಲೂಟಿ ಹೊಡೆದು ತಂದು ಸೋಲಿಸಿದರು. ಹಣ ಮತ್ತು ಹೆಂಡದ ಬಲದಿಂದ ಗೆಲ್ಲಬೇಕೆನ್ನುವ ಕಾಂಗ್ರೆಸ್ ಲೆಕ್ಕಾಚಾರ ನಡೆಯಲ್ಲ. ಸಿದ್ದರಾಮಯ್ಯ ಹಿಂದುಳಿದ ನಾಯಕನೆಂದು ಇದೀಗ ಅವರನ್ನು ಮರೆತಿದ್ದಾರೆ. ಬಡ ವಾಲ್ಮೀಕಿ ಜನಾಂಗದ ಯುವ ಸಮುದಾಯ ಸ್ವಯಂ ಉದ್ಯೋಗ ಕೈಗೊಳ್ಳಲು ಮೀಸಲಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಇಂತಹವರನ್ನು ಅಧಿಕಾರದಿಂದ ದೂರವಿಡಿ. ಕಳೆದ ಹಲವು ಬಾರಿ ಭಿನ್ನಮತದಿಂದ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಎಲ್ಲರೂ ಒಂದಾಗಿ ಚುನಾವಣೆ ಎದಿರಿಸುತ್ತಿದೆ ಅಭ್ಯರ್ಥಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕೆ ಬರ್ತಾರೆ. ಅವರಿಗೆ ನೀವು
ರೈತರಿಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಿದಿರಿ, ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿ. ಬಡವರ ವಿರೋಧಿ, ರೈತರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಬಂದ ಬಿಜೆಪಿಗೆ ಮತನೀಡಿ, ಒಳ ಮೀಸಲಾತಿಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ ಇದರಿಂದ ಇದು ಪರಿಶಿಷ್ಟರ ವಿರೋಧಿ ಸರ್ಕಾರವೂ ಆಗಿದೆ ಎಂದರು.
ಸಿದ್ದರಾಮಯ್ಯ ಕುಟುಂಬ ಭ್ರಷ್ಟಾಚಾರ ದಲ್ಲಿ ಮುಳುಗಿದೆ ಮೂಡ ಹಗರಣದಲ್ಲಿ ಆರೋಪಿ ನಂ 1 ಆಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯೋಗ್ಯತೆ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಪಾದದ ಧೂಳಿಗೆ ಸಿದ್ದರಾಮಯ್ಯ ಸಮವಲ್ಲ. ಅವರ ಬಗ್ಗೆ ವಮಾತನಾಡೋ ಯೋಗ್ಯತೆ ಅವರಿಗಿಲ್ಲ ಎಂದು ಆಗ್ರಹಿಸಿದರು.
ಅಭಿವೃದ್ಧಿ ನಿಂತಿದೆ, ಗ್ಯಾರೆಂಟಿ ಯೋಜನೆಗಳು ಕಣ್ಣುವರೆಸುವ ತಂತ್ರ, ಆರ್ಥಿಕ ಪರಿಸ್ಥಿ ಹದಗೆಟ್ಟಿದೆ. ಸಂಬಳ ಕೊಡಲು ಹಣ ಇಲ್ಲ. ರಾಜು ಕಾಗೆ, ಆರ್.ವಿ.ದೇಶಪಾಂಡೆ, ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಬಗ್ಗೆ ಖರ್ಗೆ ಛೀ ಮಾರಿ ಹಾಕಿದ್ದಾರೆ. ಗ್ಯಾರಂಟಿ ನಿಲ್ಕಿಸೋದಾಗಿ ಡಿಕೆಶಿ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಇತ್ರೀಚೆಗೆ ಬೆಂಗಳೂರಿನಲ್ಲಿ ಛೀಮಾರಿ ಹಾಕಿದ್ದಾರೆ ಎಂದರು.
ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಕೃಷ್ಣ ನಾಯ್ಕ, ಅರವಿಂದ ಬೆಲ್ಲದ, ಸಂಸದ ಬಿ.ಶ್ರೀರಾಮಲು, ಮಾಜಿ ಸಂಸದ ಫಕೀರಪ್ಪ, ಮಾಜಿ ಶಾಸಕರಾದ ಸೋಮಲಿಂಗಪ್ಪ, ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ದಿವಾಕರ, ಬಿಜೆಪಿ ಅಭ್ಯಾರ್ಥಿ ಬಂಗಾರ ಹನುಮಂತು, ವಿಜಯನಗರ ಜಿಲ್ಲಾಧ್ಯಕ್ಷ ಚನ್ಮಬಸವನಗೌಡ, ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ಮೋಕ, ಬಳ್ಳಾರಿ ಪಾಲಿಕೆ ಸದಸ್ಯ ಗೋವಿಂದ ರಾಜು, ಇತರರಿದ್ದರು.
ಅಯೋಗ್ಯ ಸಚಿವ ಜಮೀರ್ ಖಾನ್ ಸೂಚನೆಯಂತೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ತುಷ್ಟೀಕರಣಕ್ಕಾಗಿ ತಲಾ ತಲಾಂತರದಿಂದ ಬಂದ ರೈತರ ಜಮೀನನ್ನು ವಕ್ಪ್ ಗೆ ಸೇರಿದ್ದು ಎಂದು ರೈತರನ್ನು ವಕ್ಕಲೆಬ್ಬಸಲು ಮುಂದಾಗಿದೆ. ಸಚಿವ ಜಮೀರ್ ಅವರನ್ನು ಗಡಿ ಪಾರುಮಾಡಬೇಕು. ವಕ್ಫ ನೋಟೀಸ್ ಸಧ್ಯ ಇದನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರೂ ಚುನಾವಣೆ ನಂತರ ಮುಂದುವರೆಯುವ ಸಾಧ್ಯತೆ ಇದೆ. ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ಬಿಜೆಪಿ ಸರ್ಕಾರ ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.