ಶ್ರೀಗಂಧದ ಮರದ ತುಂಡು ಸಾಗಿಸುತ್ತಿದ್ದ ಆರೋಪಿಗಳ ಬಂಧನ

Crime Logo
Published on

ಬ್ಯಾಡಗಿ: ಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ 1.10 ಲಕ್ಷ ರೂ. ಮೌಲ್ಯದ ಗಂಧದ ಕಟ್ಟಿಗೆ ವಶಪಡಿಸಿಕೊಂಡ ಟನೆ ತಾಲೂಕಿನ ಕಾಸಂಬಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಕಾಗಿನೆಲೆಯ ಮಲ್ಲೇಶ ಚನ್ನಬಸಪ್ಪ ಪೂಜಾರ (34), ಮಂಜುನಾಥ ಯಲ್ಲಪ್ಪ ದೇವಗಿರಿ (44) ಬಂಧಿತ ಆರೋಪಿಗಳು. ಇವರ ಜತೆಗೆ ಇದ್ದ ಖಂಡೆಪ್ಪ ಸಂಭಾಜಪ್ಪ ಪವಾರ (40), ಭೀಮ ನೀಲಗಿರಿಯಪ್ಪ ಹೆಳವರ, ಮಂಜುನಾಥ ರಾಜಪ್ಪ ಪವಾರ ಎಂಬ ಮೂವರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಇವರು ಕಾಸಂಬಿ ರಸ್ತೆಯಲ್ಲಿ ಶ್ರೀಗಂಧದ ಮರಕಡಿದು ಅದರ ತುಂಡುಗಳನ್ನು ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 70 ಸಾವಿರ ರೂ. ಮೌಲ್ಯದ ಗಂಧದ ಮರ ತುಂಡು, 40 ಸಾವಿರ ರೂ. ಮೌಲ್ಯದ ಮರ ಕಡಿಯಲು ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಕಾಗಿನೆಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net