ಸ್ಯಾಂಡಲ್​ವುಡ್​​ಗೆ ಶಾಪವಾಗಿದ್ಯಾ '17', ಚಿರು, ಸಂಚಾರಿ ವಿಜಯ್, ಅಪ್ಪು ಹುಟ್ಟಿದ್ದು ಇದೇ ತಾರೀಖು....

appu pic
Published on

ಬೆಂಗಳೂರು: ಸ್ಯಾಂಡಲ್‌ವುಡ್ ಕಳೆದ ಒಂದೂವರೆ ವರ್ಷದಲ್ಲಿ ಮೂವರು ಪ್ರತಿಭಾನ್ವಿತ ನಟರನ್ನು ಕಳೆದುಕೊಂಡಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರಂಜೀವಿ ಸರ್ಜಾ, ಅಪಘಾತದಲ್ಲಿ ಅಗಲಿದ ಸಂಚಾರಿ ವಿಜಯ್ ಈಗ ಪುನೀತ್ ಅವರೂ ಹೃದಯಾಘಾತದಿಂದ ಮೃತಪಟ್ಟಿದ್ದು, ಸ್ಯಾಂಡಲ್​ವುಡ್​ಗೆ ತುಂಬಲಾರದ ನಷ್ಟವಾಗಿದೆ.

ಕಳೆದ ಒಂದೂವರೆ ವರ್ಷದಿಂದ ಪ್ರತಿಭಾನ್ವಿತ ಯುವ ನಟರನ್ನು ಕಳೆದುಕೊಂಡ ನೋವನ್ನು ಕನ್ನಡ ಚಿತ್ರರಂಗ ಅನುಭವಿಸುತ್ತಲೇ ಬಂದಿದೆ. ಚಿರು ಸಾವು ಕರೊನಾ ಸಂದರ್ಭ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾಗಿತ್ತು. ಅದರ ನೋವು ಮಾಸುವ ಮುನ್ನವೇ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅಪಘಾತದಿಂದ ಸಾವನ್ನಪ್ಪಿದರು. ಆ ಸಾವಿನ ನೋವು ಹಾಗೆಯೇ ಇರುವಾಗಲೇ ಸ್ಯಾಂಡಲ್‌ವುಡ್ ಮತ್ತೊಮ್ಮೆ ಪ್ರತಿಭಾನ್ವಿತ ಸ್ಟಾರ್ ನಟ, ಪುನೀತ್ ರಾಜ್​ಕುಮಾರ್​ ಅವರು ಇಂದು ಹೃದಯಾಘಾತದಿಂದ ಅಗಲಿದ್ದಾರೆ.

ಅಗಲಿದ ಮೂರು ನಟರು ಹುಟ್ಟಿದ್ದು 17ನೇ ತಾರೀಖು:

ಇನ್ನೊಂದು ಪ್ರಮುಖ ವಿಚಾರವೆಂದರೆ ಮೂವರು ನಟರು ಹುಟ್ಟಿದ್ದು ಒಂದೇ ತಾರೀಖು. ಅಂದರೆ ಸ್ಯಾಂಡಲ್​ವುಡ್​​ಗೆ 17ನೇ ತಾರೀಖು ಶಾಪವಾಗಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ.
ಕಳೆದ ವರ್ಷ ನಿಧನರಾದ ನಟ ಚಿರಂಜೀವಿ ಸರ್ಜಾ, 17 ಅಕ್ಟೋಬರ್ 1984 ರಂದು ಹುಟ್ಟಿದ್ದಾರೆ.

ತಡರಾತ್ರಿ ಔಷಧ ತರಲು ಹೋಗುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟ ಪ್ರತಿಭಾನಿತ್ವ ನಟ ಸಂಚಾರಿ ವಿಜಯ್ ಹುಟ್ಟಿದ್ದು ಕೂಡ 17 ಜುಲೈ 1983 ರಂದು.

ಹೃದಯಘಾತದಿಂದ ಇಂದು ಅಗಲಿದ ವರನಟ ಡಾ. ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಕೂಡ 17 ಮಾರ್ಚ್ 1975 ರಂದು ಹುಟ್ಟಿದ್ದಾರೆ. ಒಂದು ರೀತಿಯಲ್ಲಿ ಇದು ಕಾಕತಾಳೀಯವೋ ಅಥವಾ 17ನೇ ತಾರೀಖು ಸ್ಯಾಂಡಲ್​ವುಡ್​​ಗೆ ಶಾಪವೋ ಎಂಬ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net