ಶ್ರೀಗಂಧದ ಬೀಡು ಕನ್ನಡ ನಾಡು

swamiji
ಶ್ರೀನಿವಾಸಪುರ ತಾಲೂಕು ಕೂಸ್ಸಂದ್ರ ಕ್ರಾಸ್ ಬಳಿಯ ಆರ್ಗ್ಯಾನಿಕ್ಲ್ಲಿ ಹಮ್ಮಿಕೊಂಡಿದ್ದ ಸಸಿಗಳ ಲೋಕಾರ್ಪಣೆ, ಕೃಷಿಕರ ಜಾಗೃತಿ ಸಮಾವೇಶವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮಂಗಳನಂದನಾಥ ಸ್ವಾಮೀಜಿ, ಬೆಲ್ಲಂ ಶ್ರೀನಿವಾಸರೆಡ್ಡಿ, ಯು.ಶರಣಪ್ಪ, ಸುಬ್ಬುಜೋಯಿಸ್ ಇದ್ದರು.
Published on

ಕೋಲಾರ/ಶ್ರೀನಿವಾಸಪುರ: ಪ್ರಪಂಚದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಶ್ರೀಗಂಧ ಬಳಕೆ ಸಾಮಾನ್ಯವಾಗಿವೆ. ಹಿಂದು ಸಂಪ್ರದಾಯದಲ್ಲಿ ಶ್ರೀಗಂಧವನ್ನು ಹುಟ್ಟಿನಿಂದ ಸಾಯುವವರೆಗೂ ವಿವಿಧ ಆಚರಣೆಗಳಲ್ಲಿ ಬಳಸಲಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಕೂಸ್ಸಂದ್ರ ಕ್ರಾಸ್ ಬಳಿಯ ಆರ್ಗ್ಯಾನಿಕ್ ಫಾರ್ಮ್‌ನಲ್ಲಿ ಮಂಗಳವಾರ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಸಂಸ್ಥೆ, ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ , ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ, ಅರಿಗ್ರಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿಗಳ ಲೋಕಾರ್ಪಣೆ ಹಾಗೂ ಕೃಷಿಕರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಶ್ರೀಗಂಧಕ್ಕೂ ನಮ್ಮ ನಾಡಿಗೂ ಅವಿನಾಭಾವ ಸಂಬಂಧ ಇದೆ. ಹೀಗಾಗಿ ನಾಡಿಗೆ ಶ್ರೀಗಂಧದ ನಾಡು ಎಂಬುದಾಗಿ ಕರೆಯುತ್ತಾರೆ. ಶ್ರೀಗಂಧ ಬೆಳೆಸುವ ಸಂದರ್ಭದಲ್ಲಿದ್ದ ಕೆಲ ಕಾನೂನಾತ್ಮಕ ಸಮಸ್ಯೆಗಳನ್ನು ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿಯೇ ಅಮರನಾರಾಯಣ ಅವರ ತಂಡ ನಿಯಮ ಬದಲಿಸಿ, ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಬದಲಾಯಿಸಿ, ಸಾರ್ವತ್ರೀಕರಣ ಮಾಡಿರುವುದು ಪ್ರಶಂಸನೀಯ ಎಂದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ರೈತರು ಉಪಕಸುಬಾಗಿ ಶ್ರೀಗಂಧ ಬೆಳೆಯುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದರು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಅಮರನಾರಾಯಣ ಮಾತನಾಡಿ, ಇತ್ತೀಚೆಗೆ ಪರಿಸರದಲ್ಲಿ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಸರಿದೂಗಿಸಲು ಎಲ್ಲರೂ ಒಂದೊಂದು ಗಿಡ ನೆಟ್ಟು ಬೆಳೆಸಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಹಾಗಾಗಿ ಸ್ವಾಮೀಜಿಯವರು ಸರ್ಕಾರದಮಟ್ಟದಲ್ಲಿ ಚರ್ಚಿಸಿ ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ ಕೊಡುಗೆಯಾಗಿ ಕೊಡಿಸಬೇಕು ಎಂದು ಮನವಿ ಮಾಡಿದರು.
ನಾಡಪ್ರಭು ಕೆಂಪೇಗೌಡ ಸೇವಾಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಬೆಲ್ಲಂ ಶ್ರೀನಿವಾಸರೆಡ್ಡಿ, ಚಿಕ್ಕಬಳ್ಳಾಪುರ ಶಾಖೆ ಮಠದ ಶ್ರೀ ಮಂಗಳನಂದನಾಥ ಸ್ವಾಮೀಜಿ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಯು.ಶರಣಪ್ಪ, ಆರಿಗ್ರಾ ಸಂಸ್ಥೆ ಮುಖ್ಯಸ್ಥ ಸುಬ್ಬುಯೋಯಿಸ್, ಪರಿಸರ ಪ್ರೇಮಿ ಪರಿಮಳ ಅಮರನಾರಾಯಣ, ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬಿಜಿಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟರಾಮರೆಡ್ಡಿ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಅಧ್ಯಕ್ಷ ಟಿ.ಎಂ.ವೆಂಕಟೇಗೌಡ, ಕಾರ್ಯದರ್ಶಿ ಸುರೇಶ್, ಜಿಪಂ ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ಮುಖಂಡ ಕೊತ್ತೂರು ಅಮರನಾಥರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net