

ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ನಟರ ಜತೆಗೆ ತೆರೆ ಹಂಚಿಕೊಂಡು ಸಾಕಷ್ಟು ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಸಾಲಿನಲ್ಲಿ ನಟಿ ರೇಖಾ ವೇದವ್ಯಾಸ್ ಕೂಡಾ ಒಬ್ಬರಾಗಿದ್ದಾರೆ. ಸುಂದರ ಮುಖದ ಈ ಚೆಲುವೆ ಈಗ ಗುರುತೆ ಸಿಗದಷ್ಟು ಬದಲಾಗಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ರೇಖಾ ವೇದವ್ಯಾಸ್ 'ಹುಚ್ಚ' ಚಿತ್ರದ ಮೂಲಕವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. 'ಚಿತ್ರ', 'ತುಂಟಾಟ', 'ಮೋನಲಿಸಾ', ಹುಡುಗಾಟ, 'ಚೆಲ್ಲಾಟ' 'ಪರಿಚಯ', 'ಬಾಸ್', 'ಬೆಂಕಿ ಬಿರುಗಾಳಿ', 'ಲೂಸ್ಗಳು', 'ಪರಮಶಿವ' ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿ ಮೋಡಿ ಮಾಡಿದರು. ಆ ಬಳಿಕ ಮತ್ತೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಈ ಬೆಂಗಳೂರು ಬೆಡಗಿ ನಟಿಸಿದರು. ಕಳೆದ 9 ವರ್ಷಗಳಿಂದ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಮುದ್ದು ಚೆಲುವೆಯನ್ನು ಮರೆತಿಲ್ಲ.
ನಟಿ ಹಲವರು ವರ್ಷಗಳ ನಂತರ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ರೇಖಾ ವೇದವ್ಯಾಸ್ ಪ್ರತ್ಯಕ್ಷ ಆಗಿದ್ದಾರೆ. ಪ್ರೋಮೊ ರಿಲೀಸ್ ಆಗಿದೆ. ಆದರೆ ಆಕೆಯನ್ನು ನೋಡಿದ ಕೆಲವರು ಶಾಕ್ ಆಗಿದ್ದಾರೆ. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಭಿಮಾನಿಗಳಂತೂ 'ಹುಚ್ಚ' ನಟಿ ರೇಖಾಗೆ ಏನಾಯ್ತು ಎಂದು ಕೇಳುವಂತಾಗಿದೆ. ಬಹಳ ತೂಕ ಇಳಿಸಿಕೊಂಡು, ಪೇಷಂಟ್ ರೀತಿ ಬಹಳ ವೀಕ್ ಆಗಿರೋದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಕಾರ್ಯಕ್ರಮದ ತೀರ್ಪುಗಾರ್ತಿ ಇಂದ್ರಜ, ರೇಖಾರನ್ನು ನೋಡಿ ತಡೆಯಲಾಗದೇ ಏನಾಯ್ತು? ಎಂದು ಕೇಳಿದ್ದಾರೆ. ನಿಮ್ಮನ್ನು ಬಹಳ ದಿನಗಳ ಬಳಿಕ ನೋಡಿದ್ದು ಖುಷಿಯಾಯಿತು. ಜೊತೆಗೆ ನಿಮ್ಮನ್ನು ಹೀಗೆ ನೋಡಿ ಅಚ್ಚರಿಯಾಗುತ್ತಿದೆ ಎಂದಿದ್ದಾರೆ. ಅದಕ್ಕೆ ಸ್ಪಂದಿಸಿದ ರೇಖಾ, "ಸಡನ್ ಆಗಿ ಈ ರೀತಿ ಆಗಿಬಿಡ್ತು" ಎಂದಿದ್ದಾರೆ. ಆದರೆ ಏನಾಯ್ತು ಅನ್ನೋದು ಪ್ರೋಮೊದಲ್ಲಿ ರಿವೀಲ್ ಆಗಿಲ್ಲ. ಭಾನುವಾ ಕಂಪ್ಲೀಟ್ ಶೋ ಪ್ರಸಾರವಾದಾಗ ಅದಕ್ಕೆ ಉತ್ತರ ಸಿಗಲಿದೆ. ನಟಿ ರೇಖಾ ವೇದವ್ಯಾಸ್ ಹೊಸ ಲುಕ್ ಇದೀಗ ಶೋ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ. ಇನ್ನು ದಿಢೀರನೇ ಆಕೆಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.