ವಿಶ್ವದಾದ್ಯಂತ ಮರಳಿನ ಅಭಾವ

Sand
Published on

ಜಿನೀವಾ: ಜಾಗತಿಕವಾಗಿ ಅತಿ ಹೆಚ್ಚು ಗಣಿಗಾರಿಕೆ ಆಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮರಳು ಪ್ರಮುಖವಾಗಿದ್ದು, ಇದರಿಂದ ವಿಶ್ವದಾದ್ಯಂತ ಮರಳಿನ ಅಭಾವ ತೀವ್ರವಾಗಿದೆ. ಅನಿಯಂತ್ರಿತ ಮರಳು ಎತ್ತುವಳಿ ಮತ್ತು ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಲಾಂತರ ವರ್ಷಗಳ ಭೌಗೋಳಿಕ ಪ್ರಕ್ರಿಯೆಯಿಂದ ಮರಳು ರೂಪುಗೊಳ್ಳುತ್ತದೆ. ಆದರೆ, ಇದನ್ನು ಬೇಜವಾಬ್ದಾರಿಯಿಂದ ಬರಿದು ಮಾಡುತ್ತಿರುವುದು ಜೀವಸಂಕುಲಕ್ಕೆ ಅಪಾಯ. ಈಗಲೂ ನಾವು ಎಚ್ಚೆತ್ತುಕೊಂಡರೆ ದೊಡ್ಡ ದುರಂತವನ್ನು ತಡೆಯಬಹುದು ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್​ಇಪಿ) ಹೇಳಿದೆ.

ಕಟ್ಟಡ ನಿರ್ಮಾಣ ಕಾಮಗಾರಿ, ಗಾಜು ತಯಾರಿಕೆಯು ಕಳೆದೆರಡು ದಶಕದಿಂದ ಮೂರು ಪಟ್ಟು ಹೆಚ್ಚಿದೆ. ಪ್ರತಿ ವರ್ಷ 50 ಶತಕೋಟಿ ಟನ್​ ಏರಿಕೆ ಕಂಡಿದೆ ಅಥವಾ ತಲಾವಾರು ಹೇಳುವುದಾದರೆ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ 17 ಕೆ.ಜಿ.ಯಷ್ಟು ಹೆಚ್ಚಿದೆ. ಅನಿಯಂತ್ರಿತ ಮರಳು ಎತ್ತುವಳಿಯಿಂದ ನದಿಗಳು ಬತ್ತುತ್ತವೆ ಮತ್ತು ನದಿಯ ಮುಖಜ ಭೂಮಿಯ ಲವತ್ತತೆ ನಶಿಸುತ್ತದೆ, ಕರಾವಳಿ ಸೀಮೆಗೆ ಹಾನಿ ಕಟ್ಟಿಟ್ಟ ಬುತ್ತಿ ಎಂದು ಯುನ್​ಇಪಿ ಎಚ್ಚರಿಕೆ ನೀಡಿದೆ.

ಮರಳು ಪ್ರಾಕೃತಿಕ ವಿಪತ್ತಿನಿಂದ ರಕ್ಷಣೆ ನೀಡುತ್ತದೆ. ಉಸುಕಿನ ಅಸಮತೋಲನವಿದ್ದಾಗ ಚಂಡಮಾರುತಗಳ ಬೀಸಿದರೆ ಅದರ ಪ್ರಕೋಪ ಹೆಚ್ಚುತ್ತದೆ. ಮರಳಿನ ಬಳಕೆ ಹೆಚ್ಚಿದಷ್ಟು ಪರಿಸರ ಸೂಕ್ಷ$್ಮವಲಯಕ್ಕೆ ಪೆಟ್ಟು ಜಾಸ್ತಿ. ಜೀವವೈವಿಧ್ಯಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಯುಎನ್​ಇಪಿ ವರದಿ ಹೇಳಿದೆ.

ಮರಳು ಗಣಿಗಾರಿಕೆಯ ದುಷ್ಪರಿಣಾಮಗಳು ವೇದ್ಯವಾಗುತ್ತಿವೆ. ಆಗ್ನೇಯ ಏಷ್ಯಾದಲ್ಲಿನ ದೊಡ್ಡ ನದಿ ಮೆಕಾಂಗ್​ ಪಾತ್ರ ಸಂಕುಚಿತಗೊಳ್ಳುತ್ತಿದೆ. ಶ್ರೀಲಂಕಾದಲ್ಲಿ ಅಳವೆಯಲ್ಲಿ ಮರಳು ಖಾಲಿಯಾದ ಕಾರಣ ಸಮುದ್ರದ ನೀರು ಒಳನಾಡನ್ನು ನುಂಗುತ್ತಿದೆ. ಕುಡಿಯಲು ಯೋಗ್ಯವಾದ ಜಲಸಂಪನ್ಮೂಲಗಳಲ್ಲಿ ಉಪು$್ಪ ನೀರು ತುಂಬುತ್ತಿದೆ. ಮೊಸುಳೆ ಮತ್ತು ಕಡಲಾಮೆಗಳು ಅಪಾಯಕ್ಕೆ ಸಿಲುಕಿವೆ ಎಂದು ಯುಎನ್​ಇಪಿ ಎಚ್ಚರಿಕೆಯ ಗಂಟೆ ಭಾರಿಸಿದೆ.

ಮರಳು ಬಿಕ್ಕಟ್ಟು ದೂರಮಾಡಲು ತುರ್ತು ಕ್ರಿಯಾಯೋಜನೆ ಅವಶ್ಯಕ ಎಂದು ಯುಎನ್​ಇಪಿ ಸಲಹೆ ಮಾಡಿದೆ. ಇದರಲ್ಲಿ ನದಿ ಮತ್ತು ಕಡಲ ತೀರದಲ್ಲಿ ಉಸುಕು ಎತ್ತುವುದರ ನಿಷೇಧ ಸೇರಿದಂತೆ ಕಠಿಣ ಕ್ರಮಗಳನ್ನು ಶಿಾರಸು ಮಾಡಿದೆ.

ಮರಳು ರೂಪುಗೊಳ್ಳುವುದ್ಹೇಗೆ?

ಲಾಂತರ ವರ್ಷಗಳ ಭೌಗೋಳಿಕ ಪ್ರಕ್ರಿಯೆಯಿಂದ ಬಂಡೆಗಳು ಸವಕಳಿಯಾಗಿ ಒಡೆಯುತ್ತವೆ. ಸಾವಿರಾರು ವರ್ಷ ನೀರಿನ ರಭಸಕ್ಕೆ ಸಿಲುಕಿದ ಈ ಶಿಲಾ ತುಂಡುಗಳು ನದಿ ಪಾತ್ರದುದ್ದಕ್ಕೂ ಉರುಳುರುಳಿ ಚಲಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಶಿಲೆಗಳು ಕಣ ಕಣವಾಗಿ ವಿಭಜನೆಗೊಂಡು ಮರಳಿನ ರೂಪ ಪಡೆಯುತ್ತವೆ. ನೈಸರ್ಗಿಕ ಪ್ರಕ್ರಿಯೆಯಿಂದ ದೊರೆತ ಈ ಸಂಪನ್ಮೂಲವನ್ನು ಬರಿದು ಮಾಡದೆ ಮುಂದಿನ ತಲೆಮಾರುಗಳಿಗೆ ಜತನದಿಂದ ಬಿಟ್ಟುಹೋಗುವ ಜವಾಬ್ದಾರಿ ಈ ತಲೆಮಾರಿನ ಮೇಲೆ ಇದೆ ಎಂದು ಯುಎನ್​ಇಪಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net