ಲಾಯರ್ ಪಾತ್ರದಲ್ಲಿ ಸಂಯುಕ್ತಾ ಹೊರನಾಡು; ಲವ್ ಬರ್ಡ್ಸ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟನೆ

Samyuktha
Published on

ಬೆಂಗಳೂರು: ‘ಲವ್ ಮಾಕ್ಟೇಲ್’ ಬಳಿಕ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ ಸಿನಿಮಾ ‘ಲವ್ ಬರ್ಡ್ಸ್’. ಕೆಲವು ದಿನಗಳ ಹಿಂದಷ್ಟೇ ನಾಯಕ, ನಾಯಕಿಯನ್ನು ಪರಿಚಯಿಸುವ ಟೀಸರ್ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಚಿತ್ರತಂಡ ಹೊಸ ಪಾತ್ರ ಪರಿಚಯಿಸುವ ಪೋಸ್ಟರ್ ರಿಲೀಸ್ ಮಾಡಿದೆ. ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಅವರ ಲುಕ್ ಬಿಡುಗಡೆ ಮಾಡಿದೆ.

ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲ ಕೇಸ್​ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ವಕೀಲೆ ಮಾಯಾ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ನಟಿಸುತ್ತಿದ್ದಾರೆ. ನಾಯಕ ದೀಪಕ್ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ, ನಾಯಕಿ ಪೂಜಾ ಪಾತ್ರದಲ್ಲಿ ಮಿಲನಾ ನಟಿಸಿದ್ದು, ಇಬ್ಬರಿಗೂ ಫ್ರೆಂಡ್ ಆಗಿರುವ ಮಾಯಾ ಪಾತ್ರದಲ್ಲಿ ಸಂಯುಕ್ತಾ ಕಾಣಿಸಿಕೊಳ್ಳಲಿದ್ದಾರೆ. ‘ಲವ್ ಬರ್ಡ್ಸ್’ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದು, ‘ಕಡ್ಡಿಪುಡಿ’ ಚಂದ್ರು ನಿರ್ವಿುಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಮೊದಲ ಹಾಡು ಭಾನುವಾರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net