'ಸಮೋಸ ತಣ್ಣಗಿದೆ, ಬಿಸಿಬಿಸಿ ಕೊಡಿ' ಸಿಟ್ಟಿಗೆದ್ದು ಗ್ರಾಹಕನ ತಲೆ ಒಡೆದ ಅಂಗಡಿ ಮಾಲೀಕ

Samosa
Published on

ಮುಂಬೈ: ಸಮೋಸಾವನ್ನು ಅನೇಕ ಜನರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ  ಬಿಸಿ ಬಿಸಿ ಸಮೋಸಾಗಳು ರುಚಿಕರವಾಗಿರುತ್ತವೆ. ಆದರೆ ಈಗ ನೀವು ಬಿಸಿ ಬಿಸಿ ಸಮೋಸಾಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರಿಕೆಯನ್ನು ಹೇಳುವ ಸಮಯ ಬಂದಿದೆ. ಬಿಸಿ ಬಿಸಿ ಸಮೋಸ ಬೇಕು ಎಂದು ಗ್ರಾಹಕ   ಕೇಳಿದ್ದಕ್ಕೆ ಕೋಪಗೊಂಡ  ಅಂಗಡಿಯ ಮಾಲೀಕ ಗ್ರಾಹಕನ ಮೇಲೆ ಹಲ್ಲೆ ನಡೆಸಿ ತಲೆ ಒಡೆದಿದ್ದಾನೆ.  ಮುಂಬೈನ ಮುಂಬ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಅಂಗಡಿಯವನ ವಿರುದ್ಧ ಕಲಂ 324 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಜಿಯಾವುದ್ದೀನ್ ಶೇಖ್ ಬಿಸಿ ಬಿಸಿ ಸಮೋಸ ತಿನ್ನಲು ಬಯಸಿದ್ದರು. ಅವರು ಮುಂಬ್ರಾದ ಆನಂದ ಕೋಳಿವಾಡದ ಮಾಜಿದ್ ಶೇಖ್ ಎಂಬ ಅಂಗಡಿಯವನಿಗೆ ಹೋಗಿ ತಿನ್ನಲು ಸಮೋಸ ಕೇಳಿದರು. ಅಂಗಡಿಯವನು ಅವನಿಗೆ ತಣ್ಣನೆಯ ಸಮೋಸವನ್ನು ಕೊಟ್ಟಾಗ, ಆ ವ್ಯಕ್ತಿ ಮತ್ತೆ ಬಿಸಿ ಸಮೋಸವನ್ನು ಕೇಳಿದನು. ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿನಿಂದ ಜಿಯಾವುದ್ದೀನ್ ಸ್ಥಳದಿಂದ ತೆರಳಿದ್ದಾನೆ. ಗಿರಾಕಿ ಜಿಯಾವುದ್ದೀನ್ ಹೋದ ಮೇಲೆ ಅಂಗಡಿಯವ ಮಜೀದ್ ಶೇಖ್ ನ ಕೋಪ ತಗ್ಗಲಿಲ್ಲ. ಜಿಯಾವುದ್ದೀನ್ ಹೊರಗೆ ಹೋಗುವಾಗ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜಿಯಾವುದ್ದೀನ್ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, 5 ರಿಂದ 6 ಹೊಲಿಗೆ ಹಾಕಲಾಗಿದೆ. ಆತನ ಕಿವಿಯೂ ಸ್ವಲ್ಪ ತುಂಡಾಗಿದೆ. ಈ ಬಗ್ಗೆ ಮುಂಬ್ರಾ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net