ಯಾರು ಕಾಯುತ್ತಾರೆ ಅವರಿಗೆ ಒಳ್ಳೆಯದು ಲಭಿಸುತ್ತದೆ; ನಟಿ ಸಮಂತಾ ಹೀಗಂದಿದ್ಯಾಕೆ?

Untitled design - 2023-10-01T204557.016
Published on

ಆಂಧ್ರಪ್ರದೇಶ: ಟಾಲಿವುಡ್​ನ ಕ್ಯೂಟ್​ ನಟಿ ಎಂದೇ ಖ್ಯಾತಿ ಪಡೆದಿರುವ ಸಮಂತಾ ರುತ್​ ಪ್ರಭು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಮುದ್ದು ಮಾತುಗಳು, ಪ್ರವಾಸಗಳಿಂದಲೇ ಅನೇಕರ ಗಮನ ಸೆಳೆಯುತ್ತಿದ್ದಾರೆ. ಇದೀಗ ಸಿನಿಮಾದಿಂದ ಕೊಂಚ ಬ್ರೇಕ್​ ತೆಗೆದುಕೊಂಡಿರುವ ನಟಿ ಇಟಲಿಯನ್ನು ಅನ್ವೇಷಣೆ ಮಾಡುವಲ್ಲಿ ನಿರತರಾಗಿದ್ದಾರೆ.

ಇತ್ತೀಚೆಗಷ್ಟೇ ವಿಜಯ್​ ದೇವರಕೊಂಡ ಜತೆ ನಟಿಸಿದ ಪ್ಯಾನ್​ ಇಂಡಿಯಾ ಚಿತ್ರ 'ಖುಷಿ' ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಸದ್ಯ ಈ ಸಿನಿಮಾದ ಬಳಿಕ ಚಿತ್ರರಂಗದಿಂದ ಕೊಂಚ ಬ್ರೇಕ್​ ತೆಗೆದುಕೊಂಡಿರುವ ಸಮಂತಾ ಇದೀಗ ವಿದೇಶ ಪ್ರಯಾಣ ಬೆಳೆಸಿದ್ದು, ತಮ್ಮ ಬಕೆಟ್ ಲಿಸ್ಟ್ ಪ್ರಯಾಣದ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಅಭಿಮಾನಿಗಳಿಗೆ ಮತ್ತು ಸೋಷಿಯಲ್​ ಮೀಡಿಯಾ ಅನುಯಾಯಿಗಳಿಗೆ ತಾವು ಹೋದ ಹೊಸ ಸ್ಥಳಗಳಲ್ಲಿ ಏನು ವಿಶೇಷತೆ, ತಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಸುಳಿವು ನೀಡುವ ನಟಿ, ಇದೀಗ ಇಟಲಿಯಲ್ಲಿ ಐಸ್​ ಕ್ರೀಂ ಸವಿಯಲು ಇತರರೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ಹಾಸ್ಯಮಯವಾಗಿ ಶೀರ್ಷಿಕೆ ಕೊಟ್ಟು ತಮ್ಮ ಸ್ಟೋರಿಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ಮೇಲೆ 'ಯಾರು ಕಾಯುತ್ತಾರೋ ಅವರಿಗೆ ಒಳ್ಳೆಯದು ಲಭಿಸುತ್ತದೆ' ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಸ್ಟೋರಿ ನೋಡಿ ಅಭಿಮಾನಿಗಳು ನಟಿ ಇಟಲಿಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ 'ಖುಷಿ' ನಂತರ ಸಮಂತಾ ಕೆಲವು ಸ್ಟಾರ್​ ನಟರ ಮುಂಬರುವ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net