ನಾಗಚೈತನ್ಯ- ಶೋಭಿತಾ ಮದುವೆ..ಸಮಂತಾ ತೆಗೆದುಕೊಂಡ ಕಠಿಣ ನಿರ್ಧಾರವೇನು ಗೊತ್ತಾ!

nag-samantha
Published on

ಹೈದರಾಬಾದ್​: ಟಾಲಿವುಡ್‌ನ ಅತ್ಯಂತ ಸುಂದರ ಜೋಡಿಯಾಗಿದ್ದ ನಾಗಚೈತನ್ಯ-ಸಮಂತಾ ಬೇರ್ಪಟ್ಟಿದ್ದು, ಇತ್ತೀಚೆಗಷ್ಟೇ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ತಿಳಿದ ಸಂಗತಿಯೇ. ಈ ನಡುವೆ ಸಮಂತಾ ಬೇರೊಬ್ಬರೊಂದಿಗೆ ಮದುವೆಯಾಗಲಿದ್ದಾರೆ ಎಂದೆಲ್ಲ ಆರೋಪಗಳು ಕೇಳಿ ಬಂದವು. ಆದರೆ ಸಮಂತಾ ಮರುಮದುವೆಯಾಗದಿರಲು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಈಗ ಇಂಡಸ್ಟ್ರಿಯಿಂದ ಕೇಳಿಬರುತ್ತಿವೆ.

ಸಮಂತಾ ಇಂತಹ ಕಠೋರ ನಿರ್ಧಾರಕ್ಕೆ ಬರಲು ಕಾರಣವಿದೆ ಎನ್ನಲಾಗುತ್ತಿದೆ. ಸಮಂತಾ- ನಾಗಚೈತನ್ಯ ವಿಚ್ಛೇದನ ಪಡೆದ ಬಳಿಕ ಸಮಂತಾ ಮೇಲೆ ಅನೇಕ ಆರೋಪ ಮತ್ತು ಅಪಪ್ರಚಾರ ಮಾಡಲಾಯಿತು. ಸಮಂತಾಗೆ ಮಕ್ಕಳನ್ನು ಹೊಂದಲು ಇಷ್ಟವಿಲ್ಲ. ಚೈತುಗೆ ತಿಳಿಯದಂತೆ ಆಕೆ ಹಲವು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ, ನಾಗ ಚೈತನ್ಯಗೆ ಇಷ್ಟವಿಲ್ಲದಿದ್ದರೂ ಬೋಲ್ಡ್ ಸೀನ್‌ಗಳಲ್ಲಿ ನಟಿಸುತ್ತಿದ್ದಾಳೆ. ಫ್ಯಾಮಿಲಿ ತನಗೆ ಅಷ್ಟಾಗಿ ಮುಖ್ಯವಲ್ಲ, ಕೆರಿಯರ್​ ಮುಖ್ಯ ಎನ್ನುತ್ತಾಳೆ, ಸ್ಯಾಮ್ ತನ್ನ ಪರ್ಸನಲ್ ಸ್ಟೈಲಿಸ್ಟ್ ಪ್ರೀತಮ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ...ಹೀಗೆ ಹತ್ತು ಹಲವು ಆರೋಗಳನ್ನು ಮಾಡಲಾಯಿತು.

ಆದರೆ, ನಾಗ ಚೈತನ್ಯ ಬಗ್ಗೆ ಒಂದೇ ಒಂದು ನೆಗೆಟಿವ್ ರೂಮರ್ ಇರಲಿಲ್ಲ. ಒಂದು ಕಡೆ ತಾನು ತುಂಬಾ ಪ್ರೀತಿಸಿ ಮದುವೆಯಾದ ಪತಿ ವಿಚ್ಛೇದನ ನೀಡಿದ್ದಕ್ಕೆ ಸಮಂತಾಗೆ ಆಗಿದ್ದ ಬೇಸರ, ಮತ್ತೊಂದು ಕಡೆ ಸುಳ್ಳು ಸುದ್ದಿ ಹಬ್ಬಿಸಿದ ಕೆಲವು ಮಾಧ್ಯಮಗಳು ಆಕೆಯನ್ನು ಕಂಗೆಡುವಂತೆ ಮಾಡಿತ್ತು. ಕಡೆಗೆ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಸಮಂತಾ. ಈ ಹಂತದಲ್ಲಿ ಸ್ಯಾಮ್ ಈ ದುಃಖವನ್ನು ಹೋಗಲಾಡಿಸಲು ಆಧ್ಯಾತ್ಮಿಕ ಮಾರ್ಗ ಆರಿಸಿಕೊಂಡು ದೇಶಾದ್ಯಂತ ಹಲವು ದೇಗುಲಗಳಿಗೆ ಭೇಟಿ ನೀಡಿದ್ದಾರೆ.

ಕಡೆಗೆ ಜೀವನದಲ್ಲಿ ಇಂತಹ ಏರಿಳಿತಗಳು ಸಹಜ ಎಂದು ಭಾವಿಸಿದ ಸ್ಯಾಮ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸತತ ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ತನ್ನ ಸ್ಟಾರ್ ಪಟ್ಟ ದಕ್ಕಿಸಿಕೊಳ್ಳಲು ಯತ್ನಿಸಿದ್ದಾಳೆ. ಟಾಲಿವುಡ್ ಅಥವಾ ಬಾಲಿವುಡ್ ಯಾವುದೇ ಆಗಿರಲಿ, ಸಿಕ್ಕ ಅವಕಾಶವನ್ನೆಲ್ಲ ಬಳಸಿಕೊಂಡು ಮುನ್ನಡೆಯುತ್ತಿದ್ದಾರೆ.

ಸಮಂತಾ-ನಾಗ ಚೈತನ್ಯ ಬ್ರೇಕಪ್ ಗೆ ಶೋಭಿತಾ ಕಾರಣವೇ? ಅಥವಾ ಬೇರೆ ಕಾರಣಗಳಿವೆಯೇ? ಅದೂ ಅಲ್ಲದೆ.. ನಾಗ ಚೈತನ್ಯ ಮೇಲೆ ಸ್ಯಾಮ್ ತುಂಬಾ ಕೋಪಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಚೈತು ತನಗೆ ಅನ್ಯಾಯ ಮಾಡಿದ್ದಾರೆ ಎಂದು ಭಾವಿಸಿದ ಸಮಂತಾ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ತನ್ನ ಜೀವನದಲ್ಲಿ ಮತ್ತೆ ಮದುವೆಯಾಗಬಾರದು, ವೈವಾಹಿಕ ಬಂಧಗಳಲ್ಲಿ ಸಿಲುಕಿಕೊಳ್ಳಬಾರದು, ತನ್ನ ಮಾಜಿ ಪತಿಗೆ ತನ್ನಿಂದಾಗಿ ಎಂಥಹ ನಿರ್ಧಾರ ತೆಗೆದುಕೊಂಡಳು ಎಂದು ಕೊರಗುವಂತೆ ಮಾಡಬೇಕು. ಅದೂ ಅಲ್ಲದೆ, ತನ್ನ ಕೆರಿಯರ್ ನಲ್ಲಿ ನಾಗಚೈತನ್ಯಗಿಂತ ಮೇಲಿರಬೇಕು, ಇದನ್ನು ನೋಡಿದ ಕ್ಷಣ ಕ್ಷಣವೂ ಹೊಟ್ಟೆಕಿಚ್ಚು ಪಡುವ ಹಾಗೆ ಬೆಳೆಯಬೇಕು ಎಂದು ಸಮಂತಾ ಯೋಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಮಂತಾ ಮೌನಕ್ಕೆ ಶರಣಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net