'ಆ ಗಾಯ ವಾಸಿಯಾಗಲು ಸಮಯ ಬೇಕು'..ಸಮಂತಾ ಮನದಾಳದ ಮಾತು!

samantha
Published on

ಹೈದರಾಬಾದ್​: ಸಿನಿಮಾಗಳಿಂದ ಬಿಡುವು ಘೋಷಿಸಿದ್ದರೂ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆಕೆ ಷೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ನೆಟಿಜನ್‌ಗಳು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

'ನಮ್ಮಲ್ಲಿ ನಮಗಿರುವ ನಂಬಿಕೆಯೇ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಗಿದೆ. ನಾನು ಅಸುರಕ್ಷಿತ ಭಾವನೆ ಹೊಂದಿದ್ದೇನೆ ಎಂದು ನನಗೆ ತಿಳಿದಿತ್ತು. ನಾನು ಬೇಗನೆ ಅದರಿಂದ ಹೊರಬಂದೆ. ಬಾಹ್ಯ ಗಾಯಗಳಿಗಿಂತ ಮಾನಸಿಕ ಗಾಯಗಳಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ' ಎಂದು ಅವರು ನಿಯತಕಾಲಿಕದ ಸಂದರ್ಶನದಲ್ಲಿ ಹೇಳಿದರು.

ಮ್ಯಾಗಜೀನ್ ಕವರ್ ಫೋಟೋದಲ್ಲಿ ಸಮಂತಾ ಲುಕ್ ಬಗ್ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ‘ನಿಮಗೆ ಗ್ಲಾಮರ್ ಇದೆ’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘ನಿಜವಾಗಿಯೂ ಸಮಂತಾ... ಎಐ ಚಿತ್ರವೇ? ಹಳೆಯ ಸಮಂತಾ ನಮಗೆ ಬೇಕು ಎಂದು ಹಲವರು ಕೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net