'ಅವು ಮಹಿಳೆಗೆ ಕನಿಷ್ಟ ಅಗತ್ಯತೆಗಳು': ಜಸ್ಟೀಸ್​ ಹೇಮಾ ಸಮಿತಿ ವರದಿಗೆ ಸಮಂತಾ ಸ್ಪಂದನೆ..

samantha
Published on

ಹೈದರಾಬಾದ್​: ಕೇರಳದಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಯ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿಯೇ ಮಾಲಿವುಡ್​ನಲ್ಲಿ ನೊಂದ ಮಹಿಳೆಯರು ತಮಗಾದ ವೇದನೆಯನ್ನು ಮುಂದೆ ಬಂದು ಹೇಳುತ್ತಿದ್ದಾರೆ ಎಂದು ನಟಿ ಸಮಂತಾ ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕುರಿತು ಇದೇ ಮೊದಲು ಪ್ರತಿಕ್ರಿಯಿಸಿದ ಸಮಂತಾ, ಸಮಿತಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಬ್ಲ್ಯುಸಿಸಿ ನಿರ್ಧಾರದಿಂದಾಗಿ ಈ ಸಮಿತಿ ವರದಿ ಸಿದ್ಧಪಡಿಸಲು ಸಾಧ್ಯವಾಗಿದೆ. ಉದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಡಬ್ಲ್ಯುಸಿಸಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿ ಉದ್ಯಮದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಅನೇಕ ತೊಡಕು ಮತ್ತು ತೊಂದರೆಗಳು ಇದ್ದು, ಅವೆಲ್ಲ ನಿವಾರಣೆಯಾಗಬೇಕಿದೆ. ಕೆಲಸದ ಸ್ಥಳಗಳು ಸುರಕ್ಷಿತ ಮತ್ತು ಗೌರಯುತವಾಗಬೇಕಿದೆ. ಇದು ಕನಿಷ್ಟ ಅಗತ್ಯವೂ ಹೌದು. ಇದಕ್ಕಾಗಿಯೇ ಅನೇಕರು ಕೃಷಿ ಮಾಡಿದ್ದಾರೆ. ಆದರೆ ಅವರ ಪ್ರಯತ್ನಗಳು ಫಲಪ್ರದವಾಗಿಲ್ಲ. ಇನ್ನಾದರೂ ಮಹಿಳೆಯರ ಸುರಕ್ಷತೆ, ಗೌರವಯುತವಾಗಿ ನಡೆಸಿಕೊಳ್ಳುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಮಂತಾ ಹೇಳಿದರು.

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಜುಗರದ ಪರಿಸ್ಥಿತಿಯ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಸಿದ್ಧಪಡಿಸಿರುವುದು ಗೊತ್ತೇ ಇದೆ. ಈ ವರದಿಯಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿದ್ದು, ಇದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net