ಸಮಂತಾ ಹೊಸ ಮನೆ; ಬಾಲಿವುಡ್​ಗೆ ಹೋಗುವ ಮುನ್ನವೇ ಮುಂಬೈನಲ್ಲಿ ಫ್ಲಾಟ್ ಖರೀದಿ

Samantha
Published on

ಕಳೆದ ಕೆಲವು ತಿಂಗಳಿನಿಂದ ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಅದರ ನಡುವೆಯೂ ಸಿನಿಮಾ ಚಿತ್ರೀಕರಣ, ಪ್ರಚಾರ ಅಂತೆಲ್ಲ ವೃತ್ತಿಧರ್ಮ ನಿಭಾಯಿಸುತ್ತಿದ್ದಾರೆ. ಅವರ ಅನಾರೋಗ್ಯದಿಂದಾಗಿ ಈಗಾಗಲೇ ‘ಶಾಕುಂತಲಂ’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ವಿಜಯ್ ದೇವರಕೊಂಡ ಜತೆ ನಟಿಸುತ್ತಿರುವ ‘ಖುಷಿ’ ಸಿನಿಮಾ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ. ಜತೆಗೆ ಅವರ ಬಾಲಿವುಡ್ ಕನಸಿಗೆ ಅನಾರೋಗ್ಯವೇ ಅಡ್ಡಗಾಲು ಎಂದು ಹೇಳಲಾಗಿತ್ತು.

ಆದರೂ, ಚೇತರಿಸಿಕೊಂಡು ಕೆಲವು ದಿನಗಳ ಕಾಲ ವರುಣ್ ಧವನ್ ಜತೆ ಹಿಂದಿ ವೆಬ್ ಸರಣಿ ‘ಸಿಟಾಡೆಲ್’ ತಂಡ ಸೇರಿಕೊಂಡಿದ್ದರು ಸಮಂತಾ. ತಮಿಳು, ತೆಲುಗಿನಲ್ಲಿ ಮಿಂಚಿದ ಬಳಿಕ ಇದೀಗ ಬಾಲಿವುಡ್​ನತ್ತ ಗಮನ ಹರಿಸಿರುವ ಸಮಂತಾ, ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ. ಐಷಾರಾಮಿ ಅಪಾರ್ಟ್​ವೆುಂಟ್ ಒಂದರಲ್ಲಿ 15 ಕೋಟಿ ರೂ.ಗೆ ಸಮುದ್ರದ ಎದುರಿಗೇ ಇರುವ ಮೂರು ರೂಮುಗಳ ಫ್ಲಾಟ್ ಖರೀದಿಸಿದ್ದಾರೆ. ನಾಗಚೈತನ್ಯ ಜತೆಗಿನ ಮದುವೆ ಮುರಿದು ಬಿದ್ದ ಬಳಿಕ, ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಸಮಂತಾ.

‘ಪುಷ್ಪ’ ಚಿತ್ರದ ‘ಊ ಅಂಟಾವಾ’ ಹಾಡು ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ಸರಣಿಯ ಮೂಲಕ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಹಿಂದಿ ಚಿತ್ರರಂಗದಿಂದಲೂ ಅವರಿಗೆ ಹೆಚ್ಚು ಅವಕಾಶಗಳು ಬರತೊಡಗಿದ ಕಾರಣ, ಮುಂಬೈಗೆ ಶಿಫ್ಟ್ ಆಗಲು ಯೋಚಿಸಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net