

ಮುಂಬೈ: ಟಾಲಿವುಡ್ ನಟಿ ಸಮಂತಾ ಸಿನಿಮಾದಿಂದ ವಿರಾಮ ತೆಗೆದುಕೊಂಡು ಮಯೋಸಿಟಿಸ್ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದು ಗೊತ್ತೇ ಇದೆ. ಮೊನ್ನೆ ಮೊನ್ನೆಯವರೆಗೂ ಅಮೆರಿಕ, ಯೂರೋಪ್ ಎಂದು ಸುತ್ತುತ್ತಿದ್ದ ಸಮಂತಾ ಮತ್ತೆ ಆಸ್ಪತ್ರೆಯ ಬೆಡ್ ನಲ್ಲಿ ದಿಢೀರ್ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಂತಾ, ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಸಮಂತಾ ಒಂದು ಕೈಗೆ ಡ್ರಿಪ್ ಮತ್ತೊಂದು ಕೈಯಲ್ಲಿ ಲ್ಯಾಪ್ ಟಾಪ್ ಇಟ್ಟುಕೊಂಡು ಸಿನಿಮಾ ನೋಡುತ್ತಿದ್ದಾರೆ. ಪೋಸ್ಟ್ನಲ್ಲಿ ಸಮಂತಾ ಬರೆದಿರುವ ಕಾಮೆಂಟ್ಗಳನ್ನು ನೋಡಿದರೆ, ಸಮಂತಾ ತನ್ನ ರೋಗನಿರೋಧಕ ಮಟ್ಟವನ್ನು ಹೆಚ್ಚಿಸಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ಸಮಂತಾ ಮಾಡಿರುವ ಪೋಸ್ಟ್ಗಳ ಪ್ರಕಾರ ಈಗ ದುಬೈನಲ್ಲಿದ್ದಾರೆ.
ಸಮಂತಾ ಕಳೆದ ಕೆಲವು ತಿಂಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಬೆಡ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡ ಅವರು, ಔಷಧಿಗಳ ಪ್ರಯೋಜನಗಳ ಕುರಿತು ಪೋಸ್ಟ್ ಮಾಡಿದ್ದಾರೆ. ಈ ಹನಿ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಸಮಂತಾಗೆ ಏನಾಗಿದೆ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ತನ್ನ ಆರೋಗ್ಯದ ಜತೆಗೆ, ಸಮಂತಾ ಇತ್ತೀಚೆಗೆ ತನ್ನ ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ಮತ್ತೆ ಒಂದಾಗ್ತಾರಾ ಎಂದು ಸುದ್ದಿಯಲ್ಲಿದ್ದಾರೆ. ಭಾನುವಾರ, ನಾಗ ಚೈತನ್ಯ ಅವರು ಫ್ರೆಂಚ್ ಬುಲ್ಡಾಗ್ ಹ್ಯಾಶ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಾಗ ಪ್ಯಾಚ್ ಅಪ್ ವದಂತಿಗಳನ್ನು ಹುಟ್ಟುಹಾಕಿದರು. ಸಮಂತಾ, ನಾಗ ಚೈತನ್ಯ ಜತೆ ಆಗುತ್ತಾರೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿತ್ತು.
ನಟಿ ಸಮಂತಾ ಹಾಗೂ ನಾಗಚೈತನ್ಯ ಪರಸ್ಪರ ಪ್ರೀತಿಸಿ ಮದುವೆ ಆದವರು. 10 ವರ್ಷಗಳ ಕಾಲ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆಗುವ ಮೂಲಕ ಇವರು ಪ್ರೀತಿಗೆ ಹೊಸ ಅರ್ಥ ನೀಡಿದರು. ಮದುವೆ ಆಗಿ ನಾಲ್ಕು ವರ್ಷ ಕಳೆಯುವುದರೊಳಗೆ ಇವರ ಡಿವೋರ್ಸ್ ಸುದ್ದಿ ಹೊರ ಬಿತ್ತು. ಇಬ್ಬರೂ 2021ರ ಅಕ್ಟೋಬರ್ನಲ್ಲಿ ಬೇರೆ ಆದರು. ಈ ಘಟನೆ ನಡೆದು ಎರಡು ವರ್ಷ ಕಳೆದಿದೆ. ಆದಾಗ್ಯೂ ಇವರ ಕುರಿತ ಚರ್ಚೆ ಕಡಿಮೆ ಆಗಿಲ್ಲ. ಇವರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಕೋರಿಕೆ ಇಟ್ಟಿದ್ದರು. ಈಗ ಸಮಂತಾ ಅವರ ಟ್ಯಾಟೂ ವಿಚಾರ ಚರ್ಚೆಗೆ ಬಂದಿದೆ.
ಸಮಂತಾ ದೇಹದ ಮೇಲೆ ಹಲವು ಹಚ್ಚೆಗಳಿವೆ. ಅವರ ಮಾಜಿ ಪತಿಯ ಸಹಿಯ ಟ್ಯಾಟೂ ಕೂಡ ಇತ್ತು. ವಿಚ್ಛೇದನ ಪಡೆದ ಹೊರತಾಗಿಯೂ ಸಮಂತಾ ಟ್ಯಾಟೂನ ಹಾಗೆಯೇ ಇಟ್ಟುಕೊಂಡಿದ್ದರು. ಆದರೆ, ಈಗ ಅದನ್ನು ಅವರು ತೆಗೆದು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸಮಂತಾ ಸಿನಿಮಾಗಳ ವಿಚಾರಕ್ಕೆ ಬಂದರೆ ನಟಿ ಸಿಟಾಡೆಲ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ವೆಬ್ ಸರಣಿಯು ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಸಮಂತಾ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರಂತೆ. ಮೇಲಾಗಿ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.