

Actress Samantha: ಕಳೆದ ಒಂದು ವರ್ಷದಿಂದ ಆನಾರೋಗ್ಯ ಸಮಸ್ಯೆಯಿಂದಾಗಿ ತಮ್ಮ ಕೆಲಸಗಳಿಗೆ ತಾತ್ಕಾಲಿಕ ಬ್ರೇಕ್ ಕೊಟ್ಟಿದ್ದ ಟಾಲಿವುಡ್ ಬ್ಯೂಟಿ ಸಮಂತಾ ರುತು ಪ್ರಭು ಇದೀಗ ತಮ್ಮ ಹೊಸ ಲುಕ್ನೊಂದಿಗೆ ಕಾಣಿಸಿಕೊಂಡಿದ್ದು, ನಟಿ ಹಂಚಿಕೊಂಡಿರುವ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಹೌದು, ಸಮಂತಾ ಆರೋಗ್ಯ ಸಮಸ್ಯೆಯಿಂದ ಚೇತರಿಕೆ ಕಂಡಿದ್ದು, ಮತ್ತೆ ಸಿನಿಮಾಗಳಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಹೊಸ ಲುಕ್ನಲ್ಲಿ ಈ ತೆಲುಗು ನಟಿ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ನಟಿ, ಅಭಿಮಾನಿಗಳಿಗೊಸ್ಕರ ಮತ್ತೆ ಸಿನಿಮಾ ಮಾಡುತ್ತೇನೆ. ಅಲ್ಲದೆ, ಚಾಲೆಂಜಿಗ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವ ಸ್ಯಾಮ್, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ತನ್ನ ಪೋಟೋಗಳನ್ನು ಹಂಚಿಕೊಂಡಿದ್ದು, ಪೋಟೊಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಮಂತಾ ಹುಡುಗಿ ತರ ಅಲ್ಲ, ಹುಡುಗನ ತರ ಕಾಣಿಸಿಕೊಂಡಿದ್ದಾರೆ ಎಂದು ನೆಟಿಜನ್ ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಕೆಲವರು ಫೋಟೋಗಳನ್ನು ನೋಡಿ ಸಮಂತಾ ಇಂಡಿಯನ್ ಸಿನಿಮಾಗಳಿಗೆ ಅಲ್ಲ, ಹಾಲಿವುಡ್ ಸಿನಿಮಾಕ್ಕೆ ತಯಾರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಂದೆಡೆ ತಮ್ಮ ಆರೋಗ್ಯವನ್ನು ಮತ್ತು ಮತ್ತೊಂದೆಡೆ ವ್ಯವಹಾರವನ್ನು ನೋಡಿಕೊಳ್ಳುವುದರಲ್ಲಿ ಬಿಜಿಯಾಗಿರುವ ಸಮಂತಾ, ಹೊಸ ಹೊಸ ವಿಷಯಗಳನ್ನು ಹೇಳುವ ಪಾಡ್ಕ್ಯಾಸ್ಟ್ಗಳ ಜತೆ ಜತೆಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.(ಏಜೆನ್ಸೀಸ್)