ಯುಪಿ ಸಿಎಂ ಯೋಗಿ ಆದಿತ್ಯಾನಾಥ್​​ರನ್ನು ಭೇಟಿಯಾದ ಎಸ್​​ಪಿ ಉಚ್ಛಾಟಿತ ಶಾಸಕಿ ಪೂಜಾ ಪಾಲ್! | Pooja Pal

Pooja Pal,  Yogi Adityanath
Published on

Pooja Pal: ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಿಲುವುಗಳನ್ನು ಬೆಂಬಲಿಸಿ ಹೇಳಿಕೆ ನೀಡಿ ಸಮಾಜವಾದಿ ಪಕ್ಷದಿಂದ ಉಚ್ಛಾಟಿತರಾಗಿರುವ ಪೂಜಾ ಪಾಲ್ ಶನಿವಾರ(ಆಗಸ್ಟ್​ 16) ಸಿಎಂ ಆದಿತ್ಯನಾಥ್​ರನ್ನು ಭೇಟಿಯಾದರು

ಪ್ರಯಾಗ್‌ರಾಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪಾಲ್​​​ರನ್ನು ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಗಂಭೀರ ಅಶಿಸ್ತಿನ ಆರೋಪದ ಮೇಲೆ ಗುರುವಾರ(ಆಗಸ್ಟ್​ 14) ಪಕ್ಷದಿಂದ ವಜಾಗೊಳಿಸಲಾಗಿತ್ತು.

ಈ ಕ್ರಮ ಸದ್ಯ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿಯನ್ನು ಬೆಂಬಲಿಸುವ ಅವರ ಹೇಳಿಕೆಗಳ ಬಗ್ಗೆ ಮಾತ್ರವಲ್ಲದೆ, ಉಚ್ಚಾಟನೆಯ ಬಗ್ಗೆ ತಿಳಿಸಲಾದ ವಿಧಾನದ ಬಗ್ಗೆಯೂ ಸಹ ಚರ್ಚೆ ನಡೆದಿದೆ. ಅಧಿಕೃತ ಉಚ್ಚಾಟನಾ ಪತ್ರದಲ್ಲಿ ಪಾಲ್ ಹೆಸರಿನ ಮುಂದೆ ಕುಮಾರಿ ಎಂಬ ಪದ ಬಳಸಿದ್ದಕ್ಕಾಗಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬಂಡಾಯ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ತೀವ್ರವಾಗಿ ಟೀಕಿಸಿದ್ದಾರೆ.

ಹೊಸ ಜೀವನಕ್ಕೆ ಕಾಲಿಟ್ಟ ಕೇವಲ ಒಂಬತ್ತು ದಿನಗಳಲ್ಲಿ ಪೂಜಾ ಪಾಲ್​​ರ ಪತಿಯನ್ನು ಕೊಲೆ ಮಾಡಲಾಯಿತು. ಅವರನ್ನು 'ಶ್ರೀಮತಿ' ಬದಲಿಗೆ ಕುಮಾರಿ ಎಂದು ಕರೆಯುವ ಮೂಲಕ ಅಖಿಲೇಶ್ ಯಾದವ್ ಪೂಜಾರನ್ನು ಅಷ್ಟೆ ಅಲ್ಲದೇ ದೌರ್ಜನ್ಯ ಸಹಿಸಿಕೊಂಡು ಬಲವಾಗಿ ನಿಂತ ಎಲ್ಲಾ ಮಹಿಳೆಯರನ್ನು ಅಗೌರವಿಸಿದ್ದಾರೆ ಎಂದರು. ಕುಮಾರಿ ಎಂಬ ಪದವು ಸಾಮಾನ್ಯವಾಗಿ ಅವಿವಾಹಿತ ಮಹಿಳೆಯರನ್ನು ಸೂಚಿಸುತ್ತದೆ, ಆದರೆ 'ಶ್ರೀಮತಿ' ಎಂಬ ಪದವನ್ನು ಸಾಂಪ್ರದಾಯಿಕವಾಗಿ ವಿವಾಹಿತ ಅಥವಾ ವಿಧವೆ ಮಹಿಳೆಯರಿಗೆ ಬಳಸಲಾಗುತ್ತದೆ ಎಂದು ಸಿಂಗ್ ಹೇಳಿದರು.

ಘಟನೆಯ ಹಿನ್ನಲೆ

ಪೂಜಾ ಪಾಲ್​​, ಬಿಎಸ್​ಪಿ ಮಾಜಿ ಶಾಸಕ ರಾಜ್​ ಪಾಲ್​​ರನ್ನು 2005 ರ ಜನೆವರಿಯಲ್ಲಿ ಮದುವೆಯಾಗಿದ್ದರು, ವಿವಾಹವಾದ ಕೇವಲ ಒಂಬತ್ತು ದಿನಗಳಲ್ಲಿ ರಾಜ್​​ರನ್ನು ಕೊಲೆ ಮಾಡಿದರು. ರಾಜಕೀಯ ದ್ವೇಶದಿಂದ ಈ ಕೊಲೆ ನಡೆದಿದ್ದು, ಅತಿಕ್ ಅಹ್ಮದ್​​ರಂತಹ ಅಪರಾಧಿಗಳ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದಕ್ಕಾಗಿ ಶಾಸಕಿ ಪೂಜಾ, ಸಿಎಂ ರನ್ನು ಸಾರ್ವಜನಿಕವಾಗಿ ಅಭಿನಂಧಿಸಿದ್ದರು.

ಪೂಜಾ ಪಾಲ್​​​ ಹೇಳಿದ್ದೇನು..?

ಯುಪಿ ವಿಧಾನಸಭೆಯಲ್ಲಿ, ಪಾಲ್ ಅವರು ಯೋಗಿಯ ಸಹಿಷ್ಣುತಾ ನೀತಿಗಳನ್ನು ಶ್ಲಾಘಿಸಿದರು, ಬೇರೆ ಯಾರೂ ನನ್ನನ್ನು ಕೇಳದಿದ್ದಾಗ ನನಗೆ ನ್ಯಾಯ ಒದಗಿಸಿದ್ದಕ್ಕಾಗಿ ಮುಖ್ಯಮಂತ್ರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net