ಸಲ್ಮಾನ್ ಖಾನ್ 'ಸಿಕಂದರ್' ಪೈರಸಿಯಲ್ಲಿ 91 ಕೋಟಿ ರೂ. ನಷ್ಟ; ನಿರ್ಮಾಪಕರಿಂದ ವಿಮಾ ಅರ್ಜಿ ಸಲ್ಲಿಕೆ| salman-khan

sikandar
Published on

salman-khan | ನಟ ಸಲ್ಮಾನ್ ಖಾನ್ ಅವರ ಮಾಸ್ ಎಂಟರ್ಟೈನರ್ ಚಿತ್ರ ಸಿಕಂದರ್, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 100 ಕೋಟಿ ರೂ.ಗಳ ನಷ್ಟದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸೋಲನುಭವಿಸಿತು. ಈ ಚಿತ್ರವು ಭಾರತದಲ್ಲಿ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ಕೇವಲ 103.45 ಕೋಟಿ ರೂಪಾಯಿಗಳನ್ನು ಮಾತ್ರ ಸಂಗ್ರಹಿಸಿದೆ. ಇದೀಗ, ಸಿಕಂದರ್ ನಿರ್ಮಾಪಕರು ಪೈರಸಿಯಲ್ಲಿ ತಮಗಾದ ನಷ್ಟಕ್ಕೆ 91 ಕೋಟಿ ರೂ.ಗಳ ವಿಮಾ ಕ್ಲೈಮ್ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಆದ ಸಾಜಿದ್ ನಾಡಿಯಾವಾಲ ಅವರು ‘ಸಿಕಂದರ್’ ಸಿನಿಮಾ ನಿರ್ಮಾಣ ಮಾಡಿದ್ದರು. ತಮಿಳಿನ ಮುರುಗದಾಸ್ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾ ಬಿಡುಗಡೆ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಇದೀಗ ನಿರ್ಮಾಪಕ ಸಾಜಿದ್ ನಾಡಿಯಾವಾಲ ‘ಸಿಕಂದರ್’ ಸಿನಿಮಾದ ಕಲೆಕ್ಷನ್ ಬಗ್ಗೆ ಆಡಿಟ್ ಮಾಡಿಸಿದ್ದು, ಬರೋಬ್ಬರಿ 91 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ಬಂದಿದೆ.

ಸಲ್ಮಾನ್ ಖಾನ್ಅನ್ನು ಬಾಕ್ಸ್ ಆಫೀಸ್​ ಸುಲ್ತಾನ್ ಎಂದು ಕರೆಯಲಾಗುತ್ತದೆ. ಸಿನಿಮಾ ಫೇಲ್​ ಆದರೂ ಸಲ್ಮಾನ್ ಖಾನ್ ಇದ್ದರೆ ಸಾಕು ಹಾಕಿದ ಹಣಕ್ಕೆ ಮೋಸವಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಮೊದಲು ಸಲ್ಮಾನ್ ಖಾನ್ ಡೇಟ್ಸ್ ಪಡೆದುಕೊಂಡು ಆ ಬಳಿಕ ಕತೆ, ಚಿತ್ರಕತೆ, ನಿರ್ದೇಶಕರನ್ನು ಹುಡುಕುತ್ತಾರೆ. ಆದರೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ನಟಿಸಿದ್ದ ‘ಸಿಕಂದರ್’ ಸಿನಿಮಾ ಭಾರಿ ನಷ್ಟ ಅನುಭವಿಸಿದೆ. ಇದರಿಂದ ಕಂಗಾಲಾಗಿರುವ ನಿರ್ಮಾಪಕ, ವಿಮೆಗೆ ಅರ್ಜಿ ಹಾಕಿದ್ದಾರೆ.

(ಏಜೆನ್ಸೀಸ್)

ಸಿನಿಮಾ ಬಿಡುಗಡೆ ಆಗುವ ಹಿಂದಿನ ದಿನವೇ ಆನ್​ಲೈನ್​​ನಲ್ಲಿ ಲೀಕ್ ಆಗಿದ್ದೇ ಭಾರಿ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ. ಸಿನಿಮಾದ ಪ್ರಿಂಟ್ ತಮಿಳ್ ರಾಕರ್ಸ್, ಮೂವಿ ರೂಲ್ಸ್, ಫಿಲಂಜಿಲ್ಲಾ ಇನ್ನೂ ಕೆಲವು ವೆಬ್​​ಸೈಟ್​ಗಳಲ್ಲಿ ಬಿಡುಗಡೆ ಆಗಿತ್ತು. ಇದರಿಂದಾಗಿ ಕೆಲವು ಪ್ರಮುಖ ಏರಿಯಾಗಳಲ್ಲಿಯೇ ಜನ ಸಿನಿಮಾ ನೋಡಲು ಬರಲಿಲ್ಲ ಎಂದು ದೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net