ಸಲ್ಲು ಭಾಯ್​​ ರಾತ್ರೋ ರಾತ್ರಿ ಕರೆ ಮಾಡಿ ಹೀಗೆಳುತ್ತಿದ್ದರು..; ಜೀಶಾನ್ ಸಿದ್ದಿಕಿ ಹೇಳಿದ್ದೇನು ಗೊತ್ತಾ | Salman Khan

Untitled design - 2024-10-28T153549.595
Published on

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದಿಕಿ(Baba Siddique) ಅವರನ್ನು ಅಕ್ಟೋಬರ್​​​ 12ರ ಸಂಜೆ ಬಾಂದ್ರಾದಲ್ಲಿರುವ ಅವರ ಮಗನ ಕಚೇರಿ ಬಳಿಯ ಖೇರ್ ನಗರದಲ್ಲಿ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ಡರು. ಈ ವಿಷಯ ತಿಳಿಯುತ್ತಿದ್ದಂತೆ ‘ಬಿಗ್ ಬಾಸ್ 18’ರ ವೀಕೆಂಡ್ ಕಾ ವಾರ್ ಚಿತ್ರೀಕರಣದಲ್ಲಿದ್ದ ಬಾಲಿವುಡ್ ಭಾಯಿಜಾನ್​​​​​ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಬಾಬಾ ಸಿದ್ದಿಕಿ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದ್ದರು. ಬಾಬಾ ಸಿದ್ದಿಕಿ ಅವರ ಅಂತಿಮ ಕಾರ್ಯಗಳಲ್ಲಿ ಸಲ್ಮಾನ್​ ಖಾನ್​(Salman Khan) ಭಾಗಿಯಾಗಿದ್ದು ಗೊತ್ತೆ ಇದೆ.

ಇದೀಗ ಬಾಬಾ ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವು ತನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಂದೆಯ ನಿಧನದ ನಂತರ ಆಧಾರಸ್ತಂಭದಂತೆ ನಿಂತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತಂದೆಯ ಹತ್ಯೆಯ ನಂತರ ಸಲ್ಮಾನ್​ ಭಾಯ್​ ತುಂಬಾ ನೊಂದಿದ್ದರು. ಅಪ್ಪ ಮತ್ತು ಸಲ್ಮಾನ್ ನಿಜವಾದ ಸಹೋದರರಂತೆ ಇದ್ದರು. ತಂದೆಯ ಮರಣದ ನಂತರ ಸಹೋದರ ನನಗೆ ಬಹಳ ಬೆಂಬಲ ನೀಡಿದರು. ರಾತ್ರಿಯಲ್ಲಿ ನಿದ್ದೆ ಬಾರದೇ ರಾತ್ರೋ ರಾತ್ರಿ ಫೋನ್​ ಮಾಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ಯೋಗಕ್ಷೇಮ ವಿಚಾರಿಸಲು ಯಾವಾಗಲೂ ಕರೆ ಮಾಡುತ್ತಿದ್ದರು. ಅವರ ಬೆಂಬಲ ಯಾವಾಗಲೂ ಇದೆ ಮತ್ತು ಅದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಕುಟುಂಬವನ್ನು ಬೆಂಬಲಿಸಲು ಬಂದ ಇತರ ಬಾಲಿವುಡ್ ತಾರೆಯರ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಜೀಶಾನ್ ಸಿದ್ದಿಕಿ, ದುಃಖದ ಸಮಯದಲ್ಲಿ ಎಲ್ಲರೂ ನಮ್ಮೊಂದಿಗೆ ನಿಂತಿದ್ದಾರೆ. ನಾನು ತಂದೆಯ (ಬಾಬಾ ಸಿದ್ದಿಕಿ) ಸ್ನೇಹಿತರನ್ನು ಸೆಲಿಬ್ರಿಟಿಗಳು ಎಂದು ಪರಿಗಣಿಸುವುದಿಲ್ಲ. ಏಕೆಂದರೆ ಮನೆಗೆ ಬರುವವರು ನಿಮ್ಮ ಹಿತೈಷಿಗಳು ಮತ್ತು ಕುಟುಂಬದ ಸದಸ್ಯರಾಗುತ್ತಾರೆ. ಬಾಬಾ ಸಿದ್ದಿಕಿ ನಿಧನದ ನಂತರ ಸಿದ್ದಿಕಿ ಕುಟುಂಬಕ್ಕೆ ಸಾಂತ್ವನ ಹೇಳಲು ಶಿಲ್ಪಾ ಶೆಟ್ಟಿ, ಸಂಜಯ್ ದತ್ ಮುಂತಾದ ಹಲವು ತಾರೆಯರು ಆಗಮಿಸಿದ್ದರು. ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ದುಃಖದ ಸಮಯದಲ್ಲಿ ನಮ್ಮೊಂದಿಗಿದ್ದ ಎಲ್ಲರೂ ನಮ್ಮ ಕುಟುಂಬದ ಸದಸ್ಯರು ಎಂದಿದ್ದಾರೆ.

ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಅವರ ಮನೆಯ ಹೊರಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಯಾವುದೇ ವಾಹನವನ್ನು ಅವರ ಮನೆಯ ಹೊರಗೆ ಅಥವಾ ಹತ್ತಿರ ನಿಲ್ಲಿಸಲು ಅನುಮತಿಸಲಾಗುವುದಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net