ಸಹ ನಟರ ಪಾತ್ರಗಳು ಕಟ್​! ಓಂ ಪುರಿ ಕಾಲಿಗೆ ಬೀಳಲು ಹೈಡ್ರಾಮಾ: ಸಲ್ಲು ವಿರುದ್ಧ ನಿಲ್ಲದ ಅಭಿನವ್ ವಾಗ್ದಾಳಿ | Salman Khan

ವಿಜಯವಾಣಿ (86)
Published on

ಮುಂಬೈ: ಪ್ರಸ್ತುತ ಹಿಂದಿಯ ಬಿಗ್ ಬಾಸ್​ ಸೀಸನ್​ 18ರಲ್ಲಿ ಸಖತ್ ಬಿಜಿಯಾಗಿರುವ ಬಾಲಿವುಡ್​ ನಟ ಸಲ್ಮಾನ್ ಖಾನ್ (Salman Khan)​ ವಿರುದ್ಧ ‘ದಬಾಂಗ್’ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್​ ಮತ್ತೊಮ್ಮೆ ಆರೋಪ ಎಸಗಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್​ ಜತೆಗಿರುವ ಜಿದ್ದನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವ ಕಶ್ಯಪ್​, ನೇರವಾಗಿ ಹಾಗೂ ಕೆಲವೊಮ್ಮೆ ಪರೋಕ್ಷ ಟಾಂಗ್ ಕೊಡುತ್ತಲೇ ಬಂದಿದ್ದಾರೆ.

ಇದೀಗ ಮತ್ತೆ ಸಲ್ಲು ವಿರುದ್ಧ ನಾಲಿಗೆ ಹರಿಬಿಟ್ಟಿರುವ ಅಭಿನವ್​, "ಸಲ್ಮಾನ್​ಗೆ ಸಹ ನಟರ ಪಾತ್ರದ ಮೇಲೂ ಕಣ್ಣಿತ್ತು. ಆಯಾ ಕಲಾವಿದರಿಗೆ ನೀಡಲಾದ ಪಾತ್ರದ ಅವಧಿ ಕಂಡರೆ ಆತನಿಗೆ ಸಹಿಸಲು ಆಗುತ್ತಿರಲಿಲ್ಲ. ಹೀಗಾಗಿಯೇ, ಕೆಲವರ ರೋಲ್​ಗಳನ್ನು ಕಟ್​ ಮಾಡುತ್ತಿದ್ದ. ಸಿನಿಮಾದ ಒಂದು ದೃಶ್ಯದಲ್ಲಿ ಓಂ ಪುರಿ ಅವರ ಕಾಲಿಗೆ ಬೀಳುವ ಸನ್ನಿವೇಶವಿತ್ತು. ಇದಕ್ಕೆ ಒಪ್ಪದ ಸಲ್ಮಾನ್​, ನಾನು ಕಾಲಿಗೆಲ್ಲ ಬೀಳುವುದಿಲ್ಲ ಎಂದು ಹಿಂದೇಟು ಹಾಕಿದ" ಎಂದಿದ್ದಾರೆ.

ಬಾಲಿವುಡ್​ನ 'ಥಿಕಾನಾ'ಗೆ ನೀಡಿದ ಸಂದರ್ಶನದಲ್ಲಿ, "ದಬಾಂಗ್ ಚಿತ್ರವು ಆರಂಭದಲ್ಲಿ 2.45 ಗಂಟೆಗಳಷ್ಟು ಉದ್ದವಿತ್ತು. ಆದರೆ, ಸಲ್ಮಾನ್​ ಅದನ್ನು ಕಡಿತಗೊಳಿಸುವಂತೆ ನನ್ನನ್ನು ಒತ್ತಾಯಿಸಿದ. ಆಗ 2 ಗಂಟೆ 20 ನಿಮಿಷಕ್ಕೆ ಇಳಿಸಿದೆ. ಇಲ್ಲಿ ನಟನಿಗೆ ಸಿನಿಮಾದ ರನ್​ಟೈಮ್​ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬದಲಿಗೆ ಚಿತ್ರದಲ್ಲಿದ್ದ ಬೇರೆ ಪಾತ್ರಗಳೊಂದಿಗೆ ಭಾರೀ ಸಮಸ್ಯೆಯಿತ್ತು. ಅರ್ಬಾಜ್ ಅವರ ಸಂಪೂರ್ಣ ಪಾತ್ರವನ್ನು ಕಡಿತಗೊಳಿಸಿದ" ಎಂದು ದೂರಿದ್ದಾರೆ.

"ದಬಾಂಗ್'​ನಲ್ಲಿ ಹಿರಿಯ ನಟ ಓಂ ಪುರಿ ಅವರಿಗೆ 5ರಿಂದ 6 ಸೀನ್​ಗಳಿತ್ತು. ಅವರಿಗೆ ನೀಡಿದ ಪಾತ್ರವು ಅಷ್ಟೇ ಚೆನ್ನಾಗಿತ್ತು. ಇದನ್ನೆಲ್ಲ ಪುರಿ ಅವರಿಗೆ ನಾನು ವಿವರಿಸಿದಾಗ ಅವರು ನಟಿಸಲು ಒಪ್ಪಿಕೊಂಡರು. ಆದರೆ, ಸಲ್ಮಾನ್​ ಖಾನ್​ಗೆ ಇದು ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿಯೇ ಅವರನ್ನು ಚಿತ್ರದಿಂದ ಕೈಬಿಡುವಂತೆ ಒತ್ತಾಯಿಸಿದ್ದ. ಅಷ್ಟಕ್ಕೆ ಸುಮ್ಮನಾಗದೆ, ನನ್ನಿಂದ ಸುಮಾರು 6 ಬಾರಿ ಸ್ಕ್ರಿಪ್ಟ್​ ಅನ್ನು ಮತ್ತೆ ಬರೆಸಿದ. ಅದು ಆತನಿಗೆ ತಕ್ಕಂತೆ" ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net